ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಹಿಂದ ಚಾಂಪಿಯನ್ ಅಲ್ಲ, ಅಹಿಂದ ಚೀಟರ್! ಇದು ಯಾವ ಸಾಮಾಜಿಕ ನ್ಯಾಯ ಸ್ವಾಮಿ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನವಿಲ್ಲ, ಎಸ್ಸಿ, ಎಸ್ಟಿ, ಒಬಿಸಿ ಹಾಸ್ಟೆಲ್ ಗಳಲ್ಲಿ ಮೂಲಸೌಕರ್ಯವಿಲ್ಲ.
ಕಳೆದ 2 ವರ್ಷಗಳಿಂದ ಒಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಟ್ಟಿಲ್ಲ
ಎಸ್ಸಿಎಸ್ಪಿ/ಟಿಎಸ್ಪಿ ಅನುದಾನ ದುರ್ಬಳಕೆ ನಿಲ್ಲುತ್ತಿಲ್ಲ ಎಂದು ಅವರು ದೂರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ನಿಮ್ಮ ಕೊಡಗೆಯಾದರೂ ಏನು ಸ್ವಾಮಿ? ದಲಿತರು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಹಿಂದ ರಾಜಕೀಯ ಮಾಡಿ, ಅವರು ವೋಟು ಗಿಟ್ಟಿಸಿಕೊಂಡು ಅಧಿಕಾರದ ಮೋಜು ಮಾಡಿದ್ದು ಬಿಟ್ಟರೆ ತಮ್ಮ ಸಾಧನೆಯಾದರೂ ಏನು ಸ್ವಾಮಿ? ಎಂದು ತೀಕ್ಷ್ಣವಾಗಿ ಅಶೋಕ್ ಪ್ರಶ್ನಿಸಿದ್ದಾರೆ.
ದೇವರಾಜು ಅರಸು ಅವರ ಅಧಿಕಾರಾವಧಿಯ ರೆಕಾರ್ಡ್ ಮುರಿಯಲು ಹರಸಾಹಸ ಮಾಡುತ್ತಿದ್ದೀರಿ. ಎಷ್ಟು ವರ್ಷ ಕುರ್ಚಿಯಲ್ಲಿ ಕೂತಿದ್ದೀರಿ ಎನ್ನುವ ರೆಕಾರ್ಡ್ ಗಿಂತ, ಕುರ್ಚಿಯಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದೀರಿ ಎನ್ನುವ ಟ್ರ್ಯಾಕ್ ರೆಕಾರ್ಡ್ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅಶೋಕ್ ಟಾಂಗ್ ನೀಡಿದ್ದಾರೆ.

