ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಘೋಷಣೆಗೆ ಮಾತ್ರ ಮರೀಬೇಡಿ ಅನುಷ್ಠಾನಕ್ಕೆ ಮಾತ್ರ ಕರೀಬೇಡಿ 5 ವರ್ಷ ನಾನೇ ಸಿಎಂ ಎಂದು ದಿನಬೆಳಗಾದರೆ ಜಪ ಮಾಡುವ ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಬಜೆಟ್ ಘೋಷಣೆಗಳು ಮರು ದಿನದ ಪತ್ರಿಕಾ ಜಾಹೀರಾತುಗಳಿಗೆ ಮಾತ್ರ ಸೀಮಿತಾನಾ? ಬಜೆಟ್ ಘೋಷಣೆಗಳನ್ನು ಜನರಿಗೆ ತಲುಪಿಸುವ ಉದ್ದೇಶವೇ ಇಲ್ಲವಾ? ಅಥವಾ ಸರ್ಕಾರ ದಿವಾಳಿ ಆಗಿದೆಯಾ? ಅಥವಾ ಅನುದಾನವೆಲ್ಲ ಭ್ರಷ್ಟಾಚಾರದಲ್ಲಿ ಗುಳುಂ ಆಗಿದೆಯಾ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
2025-26 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ ಬಿಡುಗಡೆಯಾದ 76,154 ಕೋಟಿ ಅನುದಾನದಲ್ಲಿ ಕೇವಲ 49,710 ಕೋಟಿ ಮಾತ್ರ ಬಳಕೆಯಾಗಿದೆಯಲ್ಲ ಸ್ವಾಮಿ ನಿಮ್ಮ ಸರ್ಕಾರದಲ್ಲಿರುವ ನಾಲಾಯಕ್ ಮಂತ್ರಿಗಳು ಏನು ಮಾಡುತ್ತಿದ್ದಾರೆ?
ಪ್ರಸಕ್ತ ಹಣಕಾಸು ವರ್ಷದ 25% ಸಮಯ ಕಳೆದು ಹೋಗಿದ್ದರೂ ಕೇವಲ 14% ಅನುದಾನ ಮಾತ್ರ ಬಳಕೆಯಾಗಿದೆಯಲ್ಲ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಘನಂದಾರಿ ಕಾರ್ಯವೈಖರಿಗೆ ಇದಕ್ಕಿಂತ ಸಾಕ್ಷಿ ಬೇಕಾ?
ಜನಸಾಮಾನ್ಯರಿಗೆ, ರಾಜ್ಯದ ಅಭಿವೃದ್ಧಿಗೆ ನಯಾ ಪೈಸೆ ಉಪಯೋಗವಿಲ್ಲದ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಪಾಲಿಗೆ ಸತ್ತು ಹೋಗಿದೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.