ಸಿದ್ದರಾಮಯ್ಯ-ಕೆಸಿ ವೇಣುಗೋಪಾಲ್ ಅವರು ವೇದಿಕೆಯಲ್ಲೇ ಗುಸುಗುಸು ಮಾತುಕತೆ

News Desk

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್ ಫಾಸ್ಟ್​​​​ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ಕೊಂಚ ತಣ್ಣಾಗಿದೆ.

ಇದರ ಮಧ್ಯ ಸಿಎಂ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ ಬುಧವಾರ ಉಳ್ಳಾಲದಲ್ಲಿ ನಡೆದ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಗುಸು ಗುಸು ಮಾತುಕತೆ ನಡೆಸಿರುವುದು ಕಂಡುಬಂದಿತು.

- Advertisement - 

ಸಿದ್ದರಾಮ್ಯಯನವರು ವೇಣುಗೋಪಾಲ್ ಅವರಿಗೆ ಪಕ್ಷದಲ್ಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದರು ಎನ್ನಲಾಗಿದೆ.

ಅಲ್ಲದೇ ವೇಣುಗೋಪಾಲ ಅವರು ಸಿಎಂಗೆ ಕರೆ ಮಾಡಿ ಬ್ರೇಕ್ ಫಾಸ್ಟ್​ಗೆ ಡಿಕೆ ಶಿವಕುಮಾರ್ ಅವರನ್ನ ಕರೆದು ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದರು.
ಅದರಂತೆ ಬ್ರೇಕ್​ ಫಾಸ್​​ ಮೀಟಿಂಗ್ ಮಾಡಿದ್ದು
, ಅದರ ಮಾಹಿತಿಯನ್ನು ಸಹ ಸಿಎಂ ವೇಣುಗೋಪಾಲ್​​ಗೆ ಸಿದ್ದರಾಮಯ್ಯ ಅವರು ತಿಳಿಸಿದರು ಎನ್ನಲಾಗಿದೆ.​

- Advertisement - 

 

 

Share This Article
error: Content is protected !!
";