ಬಿಕೆ ರವಿ ಅವರ ಅಂತಾರಾಷ್ಟ್ರೀಯ ಆವೃತ್ತಿ ಬಿಡುಗಡೆ ಮಾಡಿದ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ “MODERN MEDIA, ELECTIONS AND DEMOCRACY” ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಿ, ಮಾತನಾಡಿದರು.

- Advertisement - 

ಸ್ವಾತಂತ್ರ್ಯ ಸಂದರ್ಭದಿಂದ ಈ ಕ್ಷಣದವರೆಗೆ ದೇಶದಲ್ಲಿ ನಡೆದ ಚುನಾವಣೆಗಳು, ಚುನಾವಣಾ ರಾಜಕಾರಣ ಕುರಿತಂತೆ ಮಾಧ್ಯಮಗಳು ಕಾಲ ಕಾಲಕ್ಕೆ ಬದಲಾಗಿರುವುದು, ಚುನಾವಣಾ ಸ್ವರೂಪದಲ್ಲಿ ಆದ ಮಾರ್ಪಾಡುಗಳು, ಇವೆಲ್ಲದರಿಂದ ಪ್ರಜಾಪ್ರಭುತ್ವದ ಮೇಲೆ ಆಗಿರುವ ಪರಿಣಾಮಗಳ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement - 

ರಾಜಕೀಯ ಸಂವಹನ” ಕ್ಷೇತ್ರದ ಆಳವಾದ ಅಧ್ಯಯನದಿಂದ  ಬಂದಿರುವ ಅಪರೂಪದ ವಿಶ್ಲೇಷಣಾತ್ಮಕ ಕೃತಿ ಇದಾಗಿದ್ದು, ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ವಿಶ್ಲೇಷಣೆಗೆ ಒಳಗಾಗಿರುವುದರಿಂದ ರಾಜಕೀಯ ವಿಜ್ಞಾನ ಮತ್ತು ಮಾಧ್ಯಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿದೆ ಎಂದು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

- Advertisement - 

 

Share This Article
error: Content is protected !!
";