ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ! ಸಿದ್ದರಾಮಯ್ಯ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ನೀವು ಇದನ್ನೇ ಕಲಿತಿರುವುದು? ಇಂತಹ ಕೊಳಕು, ಕೀಳು ಮಾತುಗಳು ಮಜಾವಾದಿಯವರ ಬಾಯಲ್ಲಿ ನುಲಿಯುತ್ತಿರುವುದು ದುರಂಹಕಾರ ಮತ್ತು ದರ್ಪದ ಪರಮಾವಧಿ.
ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿಗಳಿಗೆ ಅವಳು, ಇವಳು ಎಂದು ಏಕವಚನದಲ್ಲಿ ಕರೆಯುವುದು. ಹಣಕಾಸು ಸಚಿವರಿಗೆ ಎಂತವಳು? ಎನ್ನುವುದು ಇದೇನಾ ಮಹಿಳೆಯರ ಬಗ್ಗೆ ಕೊಡುವ ಗೌರವ,ಮರ್ಯಾದೆ ಸಿದ್ದರಾಮಯ್ಯನವರೇ ?
ಇದೇನಾ ಭಾರತೀಯ ಕಾಂಗ್ರೆಸ್ ಸಂಸ್ಕೃತಿ? ಮುಖ್ಯಮಂತ್ರಿ ಎಂಬುದನ್ನು ಮರೆತು ಬಳಸುತ್ತಿರುವ ಭಾಷೆ, ಕೀಳುಮನಸ್ಥಿತಿ ಮಾತುಗಳಿಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

