ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋಟ್ಯಂತರ ಬಡಜನರ ಪಾಲಿಗೆ ಸಂಜೀವಿನಿಯಾಗಿ, ಕೈಗೆಟುಕುವ ದರದಲ್ಲಿ ಔಷಧ ನೀಡುವ ಉದ್ದೇಶದೊಂದಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆರಂಭಿಸಿದ್ದ ಜನೌಷಧ ಕೇಂದ್ರಗಳನ್ನು ರಾಜಕೀಯ ದ್ವೇಷದಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಲು ಆದೇಶಿಸಿತ್ತು ಜೆಡಿಎಸ್ ತಿಳಿಸಿದೆ.
ಆದರೆ, ಆರೋಗ್ಯ ಇಲಾಖೆ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ತಡೆ ವಿಧಿಸಿ, ಸಿದ್ದರಾಮಯ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಜೆಡಿಎಸ್ ತಿಳಿಸಿದೆ.