ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆ ಪೂರ್ವ ಬಣ್ಣ ಬಣ್ಣದ ಮಾತನಾಡಿ ಪಂಚಮಸಾಲಿ ಸಮುದಾಯದ ಜನರ ಕಿವಿಗೆ ಹೂವಿಟ್ಟ ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರು ಈಗ ಮೀಸಲಾತಿ ಕೇಳಿದ್ದಕ್ಕೆ ಲಾಠಿ ಪ್ರಯೋಗಿಸುವ ಮೂಲಕ ಪ್ರತಿಭಟಿಸುವ ಹಕ್ಕು ಕಿತ್ತುಕೊಳ್ಳಲು ಹೊರಟಿದೆ ರಣಹೇಡಿ ಸರ್ಕಾರ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕೊಟ್ಟ ಮಾತು ಮರೆತಿರುವ ಸಿದ್ದರಾಮಯ್ಯನವರು ಪಂಚಮಸಾಲಿಗಳ ನ್ಯಾಯಯುತ ಬೇಡಿಕೆ ಆಲಿಸದೆ ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ವಚನಭ್ರಷ್ಟ ಸಿದ್ದರಾಮಯ್ಯನವರು, ಮಾತು ಕೊಟ್ಟು ತಪ್ಪಿದ್ದಲ್ಲದೇ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಜನರ ಹಕ್ಕುಗಳನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಅಂದಿನ ಸರ್ವಾಧಿಕಾರಿ ಇಂದಿರಾ ಗಾಂಧಿ ಅವರನ್ನೇ ಅನುಸರಿಸುತ್ತಿದ್ದಾರೆ ಇಂದಿನ ಸಿದ್ದರಾಮಯ್ಯನವರು ಎಂದು ಬಿಜೆಪಿ ಕಿಡಿಕಾರಿದೆ.