ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಮೇಲೆ ಬಂದಿರುವ ಹಗರಣಗಳ ಆರೋಪವನ್ನು ಮುಚ್ಚಿ ಹಾಕಲು ತಮಗೆ ಬೇಕಾಗುವ ಅಧಿಕಾರಿಗಳ ಮುಖಾಂತರ ತನಿಖೆ ನಡೆಸಿ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಈಗ ಇಡಿ ತನಿಖೆಯಿಂದ ಸತ್ಯ ಹೊರಬರುತ್ತಿದ್ದಂತೆ ಇಡಿ ಮೇಲೆ ಕೋಪ ಶುರುವಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಸತ್ಯವನ್ನು ಮುಚ್ಚಿಡೋಕೆ ಸಾಧ್ಯವಿಲ್ಲ. ಇಡಿ ತನಿಖೆಗೂ ಮುನ್ನವೇ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ವೈಟ್ನರ್ ಮೂಲಕ ತಿದ್ದುಪಡಿ ಮಾಡಿದ ವರದಿ ಪ್ರಸಾರವಾಗಿದ್ದವು.
ಮುಖ್ಯಮಂತ್ರಿಗಳಿಗೆ ಪ್ರಾಮಾಣಿಕತೆ ಇದ್ದಿದ್ದರೆ ಅದನ್ನು ಬಹಿರಂಗಪಡಿಸಬೇಕಿತ್ತು. ಪ್ರಾಮಾಣಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.

