ಚಂದ್ರವಳ್ಳಿ ನ್ಯೂಸ್ ಬೆಂಗಳೂರು ಕಾಂಗ್ರೆಸ್ ಹೈಕಮಾಂಡ್‌ಗೆ ತಿಂಗಳ ಕಲೆಕ್ಷನ್ ಚೆನ್ನಾಗಿ ಮಾಡಿಕೊಟ್ಟ ಸಿದ್ದರಾಮಯ್ಯ ಅವರು ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ತಯಾರಿ ನಡೆಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ತಾವೇ ಪೂರ್ಣವಧಿ ಸಿಎಂ, ತಮ್ಮ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯೂ ನಡೆಯುತ್ತದೆ ಎಂದು ಆಪ್ತ ಸಚಿವರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ.
ಸಿಎಂ ಹುದ್ದೆಯ ಕನಸನ್ನು ಕಾಣುತ್ತಿರುವ ಡಿ ಕೆ ಶಿವಕುಮಾರ್ ಅವರಿಗೆ ಈಗ ಅದೊಂದು ತಿರುಕನ ಕನಸಿನಂತಾಗಿದೆ. ಡಿಕೆಶಿ ಅವರ ತಾಯಿ ತಮ್ಮ ಮಗನ ಕುರಿತಾಗಿ ಅಂದು ಹೇಳಿದ ಭವಿಷ್ಯ ನಿಜವಾಗುತ್ತಿದೆ.
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ ಡಿಕೆಶಿಗೆ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರ ಮೂಲಕ ಮತ್ತೊಂದು ಚೆಕ್‌ಮೇಟ್ ಕೊಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಗೂ ಸಹ ಡೈನಾಮೇಟ್ ಇಟ್ಟು ಡಿಕೆಶಿಯನ್ನು ನಿರಾಶ್ರಿತರನ್ನಾಗಿ ಮಾಡಲು ತಯಾರಿ ನಡೆಸಿದ್ದಾರೆ.
ವಲಸಿಗರ ಹಾವಳಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ದಿನೇ ದಿನೇ ಮೂಲೆಗುಂಪು ಆಗುತ್ತಿರುವ ಡಿಕೆಶಿಗೆ ಸಿಎಂ ಹುದ್ದೆಯನ್ನು “ಕಿತ್ತು ಪಡೆದುಕೊಳ್ಳುವುದೇ” ಈಗ ಉಳಿದಿರುವ ಏಕೈಕ ದಾರಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.

