ಅಂದು ಅರಸು ಇಂದು ಸಿದ್ದು ಘೋಷಣೆಗೆ ಗರಂ ಆದ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ ಅಂದು ದೇವರಾಜ ಅರಸು, ಇಂದು ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆದಿದೆ.

ದೇವರಾಜ ಅರಸು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಅಭಿಮಾನಿ ಈ ರೀತಿ ಕೂಗುತ್ತಿದ್ದಂತೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

- Advertisement - 

ಮೈಸೂರು ಡಿಸಿ ಕಚೇರಿ ಆವರಣದಲ್ಲಿ ನಡೆದ ಅರಸು ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಲು ಬರುತ್ತಿದ್ದಂತೆ ಅಭಿಮಾನಿ ಕಂಸಾಳೆ ರವಿ ಘೋಷಣೆ ಕೂಗಿದ್ದಾರೆ.

ಈ ವೇಳೆ ಗರಂ ಆದ ಸಿಎಂ, ಘೋಷಣೆ ಕೂಗಿದವರು ಯಾರು ಎಂದು ಗದರಿದರು. ನನಗೂ ದೇವರಾಜ ಅರಸು ಅವರಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

- Advertisement - 

 

 

 

Share This Article
error: Content is protected !!
";