ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ತಾರತಮ್ಯದಿಂದ ಕೂಡಿದೆ ಎಂಬುದನ್ನು ಸ್ವತಃ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಕಲ್ಯಾಣ ಪಥ ಯೋಜನೆಯ ಪ್ರಾರಂಭೋತ್ಸವ ಬಜೆಟ್ ನಲ್ಲಿ ಅನುದಾನ ಹಂಚಿಕೆ, ಯೋಜನೆ ಘೋಷಣೆ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಗೆ ಮಹಾದ್ರೋಹವಾಗಿದೆ. ಕಲ್ಯಾಣ ಕರ್ನಾಟಕದ ಮಂದಿಗೆ ಅನ್ಯಾಯ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷರೇ ಸಿದ್ದರಾಮಯ್ಯ ಸರ್ಕಾರಕ್ಕೆ ಬಹಿರಂಗ ವೇದಿಕೆಯಲ್ಲೇಮಂಗಳಾರತಿ ಎತ್ತಿದ್ದಾರೆ ಎಂದು ಹೇಳಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ನಿಮ್ಮದು ತುಷ್ಟೀಕರಣದ ಬಜೆಟ್. ಕೆಲವರಿಗಾಗಿ ಬಹುಜನರ ಹಿತವನ್ನು ಮರೆತಿದ್ದೀರಿ ಎಂಬುದು ಸತ್ಯ. ಅದಕ್ಕೆ ಖರ್ಗೆಯವರ ಮಾತಿನ ಛಡಿ ಏಟುಗಳೇ ಸಾಕ್ಷಿ ಎಂದು ತಿಳಿಸಿದೆ.

