ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಬಾಯಲ್ಲಿ ಮಾತ್ರ ಕನ್ನಡ ಪ್ರೇಮಿ ಎಂದು ಹೇಳಿಕೊಳ್ಳುತ್ತಾರೆ. ಕನ್ನಡ ಶಾಲೆಗಳನ್ನು ಮುಚ್ಚುವುದರಲ್ಲಿ ಇವರು ಎತ್ತಿದ ಕೈ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಕಳೆದ 2024-2025ನೇ ಶೈಕ್ಷಣಿಕ ವರ್ಷವೊಂದರಲ್ಲೇ ಕೋಲಾರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿ, ಮುಚ್ಚಲಾಗಿದೆ.
ಮುಳಬಾಗಿಲು , ಶ್ರೀನಿವಾಸಪುರ ಬಂಗಾರಪೇಟೆ ತಾಲೂಕುಗಳ ಗಡಿಭಾಗಗಳಲ್ಲಿರುವ ಬಹಳಷ್ಟು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲ್ಪಟ್ಟಿವೆ.
ಶಾಲೆಗಳಲ್ಲಿ ಪೀಠೋಪಕರಣಗಳು ತುಕ್ಕು ಹಿಡಿಯುತ್ತಿವೆ. ಸೂಕ್ತ ನಿರ್ವಹಣೆ ಇಲ್ಲದೆ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಶಾಲೆಗಳ ಕಾಂಪೌಂಡ್ ಗೇಟ್ ತೆರೆದಿರುವ ಕಾರಣ ಶಾಲೆಯ ಆವರಣಗಳು ಕುಡುಕರ ತಾಣಗಳಾಗುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಸಚಿವ ಮಧು ಬಂಗಾರಪ್ಪ ಅವರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ಶಾಲೆಗಳನ್ನು ಉಳಿಸಿ ಕೊಳ್ಳುವ ಕೆಲಸ ಮಾಡಲಿ ಎಂದು ಜೆಡಿಎಸ್ ತಾಕೀತು ಮಾಡಿದೆ.