ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ಸರ್ಕಾರಕ್ಕೆ ವರ್ಗಾವಣೆ ಹಣ ಮಾಡುವ ದಂಧೆಯಾಗಿದ್ದು, ಕಾಸು ಕೊಟ್ಟರೇ ಟ್ರಾನ್ಸ್ಫರ್ಗ್ಯಾರಂಟಿಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಪುತ್ರ ಯತೀಂದ್ರ ಶ್ಯಾಡೋ ಸಿಎಂ ರೀತಿ ವರ್ಗಾವಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಯಾವುದೇ ಟ್ರಾನ್ಸ್ಫರ್ಆಗಬೇಕಾದರೂ ಮಗನ ಶಿಫಾರಸ್ಸು ಇರಬೇಕು, ಇಲ್ಲ ಅಪ್ಪನ ಆದೇಶ ಕಡ್ಡಾಯವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

