ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವುದನ್ನು ಖಂಡಿಸ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಮಾಮ್ ಸಾಬಿಗೂಗೋಕುಲಾಷ್ಠಮಿಗೂ ಏನು ಸಂಬಂಧ? ಸಿದ್ರಾಮಣ್ಣ ಏನು ಸಂಬಂಧ? ಎಂದು ಖಾರವಾಗಿ ಅಶೋಕ್ ಪ್ರಶ್ನಿಸಿದರು.
ಖ್ಯಾತ ಕವಿ ನಿಸಾರ್ ಅಹ್ಮದ್ ಉದ್ಘಾಟಿಸಿದ್ರು ಅಂದ್ರಿ. ನಾನು ಕಂದಾಯ ಸಚಿವನಾಗಿದ್ದಾಗ ಅವರಿಗೆ ಚಿಕ್ಕಬಳ್ಳಾಪುರದಲ್ಲಿ 5 ಎಕರೆ ಭೂಮಿ ಕೊಟ್ಟಿದ್ದೆ. ಜೋಗದ ಸಿರಿ ನಿತ್ಯೋತ್ಸವ ಅಂತ ಕವಿತೆ ಬರೆದಿದ್ರು. ಕರ್ನಾಟಕದ ನದಿಗಳ ಬಗ್ಗೆ ಬರೆದಿದ್ದರು. ಅವರು ನನ್ನ ಕ್ಷೇತ್ರದಲ್ಲೇ ಇದ್ದರು. ಅವರು ಯಾವತ್ತೂ ಧರ್ಮದ ವಿರುದ್ಧ ಮಾತನಾಡಿರಲಿಲ್ಲ. ಅವರಿಗೆ ಯಾಕೆ ಈ ಯಮ್ಮನನ್ನು ಹೋಲಿಕೆ ಮಾಡ್ತೀರಾ? ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ದಸರಾ ಉದ್ಘಾಟಿಸಲು ಕುರುಬರಲ್ಲಿ ಯಾರು ಸಿಗಲಿಲ್ವೇ. ಒಕ್ಕಲಿಗ, ಹಿಂದುಳಿದ ಜನ ಸಿಗಲಿಲ್ಲೇ? ಉದ್ಘಾಟನೆ ಮಾಡೋಕೆ ಆಗಲಿಲ್ವಾ. ಆಪರೇಷನ್ ಸಿಂಧೂರ ಆಯ್ತಲ್ಲ. ಅವರನ್ನು ಕರೆತಂದು ಬೇಕಾದರೆ ಮಾಡಿಸಿ. ಈಯಮ್ಮ ದೇಶಕ್ಕಾಗಿ ಹೋರಾಡಲಿಲ್ಲ. ಇವರಿಗೆ ದಸರಾ ಬಗ್ಗೆ ಭಕ್ತಿಯಿಲ್ಲ. ವಿಜಯದಶಮಿ ಬಗ್ಗೆ ಇವರಿಗೆ ಭಕ್ತಿ ಇಲ್ಲ. ಇತಿಹಾಸವೇ ಈ ಯಮ್ಮನಿಗೆ ಗೊತ್ತಿಲ್ಲ. ಅಂತರವನ್ನು ಕರೆತಂದು ದ್ರೋಹ ಬಗೆಯುತ್ತಿದ್ದೀರ. ಇದು ಕಾಂಗ್ರೆಸ್ ಸರ್ಕಾರವಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ ಎಂದು ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ಮಾಡಿದರು.
ಧಾರ್ಮಿಕ ಶಿಷ್ಟಾಚಾರ ತರುತ್ತೇವೆ:
ಚಾಮುಂಡಿ ಬೆಟ್ಟದ ಸುತ್ತ ರಾಜಕೀಯ ನಡೆದಿದೆ ಎಂಬ ಪ್ರಮೋದಾದೇವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅಶೋಕ್ ಅವರು, ಪ್ರಮೋದಾದೇವಿ ಅವರು ಸರಿಯಾಗಿಯೇ ಹೇಳಿದ್ದಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಒಲೈಕೆ ಮಾಡ್ತಿದ್ದಾರೆ. ಎಸ್ ಸಿ, ಎಸ್ಟಿ ಬೇರೆಯವರು ಸಿಗಲಿಲ್ಲ? ಟಿಪ್ಪು ಸಂತತಿ ಕರೆತಂದು ಮಾಡಬೇಕೇ? ಯಧುವೀರ್ ವಂಶವನ್ನು ಸೆರೆಯಲ್ಲಿಟ್ಟವರು. ಹಿಂದೂಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ವೇ? ಒಳ್ಳೆಯ ಕವಿಗಳು ಇರಲಿಲ್ವೇ? ಎಲ್ಲಾ ಸುತ್ತಿ ಇಲ್ಲೇ ಹಿಡಿದು ತರುತ್ತೀರಲ್ಲ. ವೋಟಿಗಾಗಿ ಈ ರೀತಿ ಮಾಡ್ತೀರಲ್ಲ. ಪಕ್ಕಾ ಹಿಂದೂ ಭಾವನೆ ಆಘಾತ ಮಾಡಿದ್ದಾರೆ. ಮುಂದೆ ನಮ್ಮ ಸರ್ಕಾರಬಂದೇಬರುತ್ತೆ. ಆಗ ನಾವು ಕಾನೂನನ್ನು ತರುತ್ತೇವೆ. ಧಾರ್ಮಿಕ ಶಿಷ್ಟಾಚಾರ ಜಾರಿಗೆ ತರುತ್ತೇವೆ ಎಂದು ಅಶೋಕ್ ಹೇಳಿದರು.
ಧರ್ಮಸ್ಥಳ ಚಲೋ ಪ್ರತಿಭಟನೆ ಕುರಿತು ಮಾತನಾಡಿದ ಅಶೋಕ್, ಪ್ರಗತಿಪರರು ಸಿದ್ದರಾಮಯ್ಯ ಹಿಂದೆ ಕೋಟೆ ರಚಿಸಿದ್ದಾರೆ. ಧರ್ಮಸ್ಥಳದ ಮೇಲೆ ಕುತಂತ್ರ ಮಾಡ್ತಿದ್ದಾರೆ. ಇವರೆಲ್ಲ ಸೇರಿ ಧರ್ಮಸ್ಥಳ ಅತಂತ್ರ ಮಾಡಿದ್ದಾರೆ. ಧರ್ಮಸ್ಥಳ ಲೂಟಿಗೆ ಹೊರಟಿದ್ದಾರೆ. ಹಿಂದೆ ಘಸ್ನಿಮಹಮದ್ ಇದ್ದ. ಅದೇ ರೀತಿ ಕಾಂಗ್ರೆಸ್ ಸರ್ಕಾರ ದಾಳಿ ಮಾಡ್ತಿದೆ. ಧರ್ಮಸ್ಥಳ ಲೂಟಿ ಮಾಡೋಕೆ ಹೊರಟಿದ್ದಾರೆ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಕುತಂತ್ರ. ಕಾಂಗ್ರೆಸ್ ಗೆ ಏನಾದ್ರೂ ಕಾಮನ್ ಸೆನ್ಸ್ ಇದ್ಯಾ?. ಇದ್ದರೆ ಯಾರು ದೂರು ಕೊಟ್ಟ ಅವನನ್ನ ಬಂಧಿಸುತ್ತಿದ್ದರು. ಇದೆಲ್ಲವೂ ದುಂದುವೆಚ್ಚ ಎಂದು ಅಶೋಕ್ ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಂದ ಮೇಲೆ ಈ ರೀತಿ ಆಗ್ತಿದೆ. ಬಿಜೆಪಿ ರಾಜಕೀಯ ಮಾಡ್ತಾರೆ ಅಂತಿದ್ದಾರೆ. ಸತ್ಯ ಬರಬೇಕಾದರೆ ಆ ವ್ಯಕ್ತಿ ಯಾರು?. ಅವನ ಹಿನ್ನೆಲೆ ಏನು ತನಿಖೆ ಮಾಡ್ತಿದ್ರಿ. ನಾವು ರಾಜಕಾರಣ ಮಾಡೋರಲ್ಲ. ಧರ್ಮಸ್ಥಳ ಎಲ್ಲ ಹಿಂದೂಗಳಿಗೆ ಸೇರಿದ್ದು. ಅದು ಬಿಜೆಪಿಗೆ ಸೇರಿದ್ದಲ್ಲ. ಧರ್ಮವನ್ನು ನಾವು ರಕ್ಷಣೆ ಮಾಡ್ತೇವೆ. ಸೆಪ್ಟಂಬರ್-1 ರಂದು ಧರ್ಮಸ್ಥಳದಲ್ಲಿ ಸಮಾವೇಶ ಮಾಡ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಧರ್ಮಸ್ಥಳದ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ. ಸರ್ಕಾರವೇ ಗುಂಡಿ ತೋಡಿಕೊಂಡಿದೆ. ಗುಂಡಿ ಮುಚ್ಚಲಾಗದ ಪರಿಸ್ಥಿತಿಗೆ ಬಂದಿದೆ. ಯಾರೋ ಹೇಳಿದ ಮಾತನ್ನು ಕೇಳಿ ದಾರಿತಪ್ಪಿದ್ದಾರೆ. ನಾವು ಇದರಲ್ಲಿ ರಾಜಕೀಯ ಮಾಡಲ್ಲ. ನಮ್ಮ ಧರ್ಮಕ್ಕೆ ಸಣ್ಣ ಅಪಚಾರವೂ ಆಗಬಾರದು. ಆ ರೀತಿ ನಾವುನೋಡಿಕೊಳ್ತೇವೆ. ಸಾವಿರ ಬಾರಿಸುಳ್ಳು ಹೇಳಿದ್ರೆ ಸತ್ಯ ಆಗಲ್ಲ ಎಂದು ಸೋಮಣ್ಣ ಟೀಕಿಸಿದರು.
ರಾಜ್ಯದ ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡಬೇಡಿ. ಸಿದ್ದರಾಮಯ್ಯ ಯಾರೋ ಹೇಳಿದ್ರು ಅಂತ ಎಸ್ಐಟಿ ಮಾಡಿದ್ರು. ಧರ್ಮಸ್ಥಳ, ಚಾಮುಂಡಿ ಬೆಟ್ಟ ಯಾವುದೇ ಆಗಲಿ. ಅಪಪ್ರಚಾರ ಮಾಡುವ ಕೆಲಸ ಮಾಡಬೇಡಿ. ನಿಸಾರ್ ಅಹಮದ್ ಆ ತಾಯಿಯನ್ನು ತಾಯಿ ಅಂದರು. ಆದ್ರೆ ಸರ್ಕಾರದ ವರ್ತನೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಅವರೇ ಇನ್ನೊಂದು ಸಿದ್ದರಾಮಯ್ಯ ಆಗಬೇಡಿ. ಕೂಡಲೇ ಹೇಳಿಕೆ ವಾಪಸ್ ಪಡೆಯಿರಿ. ಸಮಾಜಮುಖಿ ಕೆಲಸ ಮಾಡಿ, ಒಲೈಕೆ ಮಾಡಬೇಡಿ. ಡಿಕೆಶಿ ಬಾಯಿಯಿಂದ ಈ ಪದ ಬರಬಾರದಿತ್ತು. ಚಾಮುಂಡಿ ತಾಯಿಯ ಬಗ್ಗೆ ವಿಶ್ವ ಮಾತಾಡುತ್ತಿದೆ. ಹಿಂದುಗಳ ಭಾವನೆಗೆ ಧಕ್ಕೆ ಮಾಡಬೇಡಿ ಎಂದು ಸೋಮಣ್ಣ ಒತ್ತಾಯಿಸಿದರು.
ನವೆಂಬರ್ ಕ್ರಾಂತಿ ವಿಚಾರವಾಗಿ ಸೋಮಣ್ಣ ಮಾತನಾಡಿ, ಈ ಹಿಂದೆ ಆರ್.ಅಶೋಕ್ ಹೇಳಿದ್ದಾರೆ. ಇಲ್ಲಿ ಕ್ರಾಂತಿನೂ ಆಗುತ್ತದೆ. ಕಾಂಗ್ರೆಸ್ ಪಾರ್ಟಿಯಲ್ಲಿರೋರಿಗೆ ವಾಂತಿನೂ ಆಗುತ್ತದೆ ಎಂದು ವ್ಯಂಗ್ಯವಾಡಿದರು.

