ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ 4,284 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದೀರಿ ಖುಷಿಯ ವಿಚಾರ ಎಂದು ಜೆಡಿಎಸ್ ತಿಳಿಸಿದೆ.
ಆದರೆ ನಿಮ್ಮ ಆಡಳಿತದಲ್ಲಿ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳು “ಸಿಲಿಕಾನ್‌ವ್ಯಾಲಿ” ಬೆಂಗಳೂರಿನ ಮರ್ಯಾದೆ ತೆಗೆಯುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಇದೆಂಥಾ ನಾಚಿಕೆಗೇಡು ? ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ಬೆಂಗಳೂರಿನ ಎಲ್ಲಾ ಪ್ರದೇಶಗಳಲ್ಲೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಸ್ತಿಗಳು ಏರಿಕೆ ಕಾಣುತ್ತಿವೆ. ಆದರೆ ಬೆಂಗಳೂರಿಗರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಕಾಣದಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಸಿಲಿಕಾನ್‌ಸಿಟಿ ರಸ್ತೆಗಳಿಗೆ ಡಾಂಬಾರು ಹಾಕುವುದು ಕೈಲಾಗದ ಮಾತು. ಹೋಗಲಿ, ಗುಂಡಿ ಬಿದ್ದಿರುವ ರಸ್ತೆಗಳಿಗೆ ತೇಪೆಯನ್ನಾದರೂ ಸರಿಯಾಗಿ ಹಾಕಿಸಿ ಮಿಸ್ಟರ್‌ಡಿಕೆ ಶಿವಕುಮಾರ್ ಅವರೇ ಎಂದು ಜೆಡಿಎಸ್ ತಾಕೀತು ಮಾಡಿದೆ.