ವಿದ್ಯಾರ್ಥಿನಿ ಹರ್ಷಿತಾಗೆ ಟೇಕ್ವೆಂಡೋ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ನಗರದ ಎಂಎಸ್‌ವಿ ಪಬ್ಲಿಕ್ ಶಾಲೆಯ ವ್ಯಾಸಂಗ
  ಮಾಡುತ್ತಿರುವ ವಿದ್ಯಾರ್ಥಿನಿ ಹರ್ಷಿತಾ ಎಂ. ಟೇಕ್ವಾಂಡೋ ಕ್ರೀಡಾಕೂಟದಲ್ಲಿ   ರಾಷ್ಟ್ರಮಟ್ಟದ ಬೆಳ್ಳಿ ಪದಕ ಪಡೆಯುವ ಮೂಲಕ ದೊಡ್ಡಬಳ್ಳಾಪುರ ಜನತೆಯ ಕೀರ್ತಿಗೆ ಪಾತ್ರರಾಗಿದ್ದಾರೆ.

ರಾಷ್ಟ್ರಮಟ್ಟದ ಕ್ರೀಡಾಕೂಟವು ಉತ್ತರ ಪ್ರದೇಶದ ಇಟಾವಾ ನಗರದಲ್ಲಿರುವ ಆಮ್ಮಿ ವಿಷನ್ ಶಾಲೆಯಲ್ಲಿ ಸೆಪ್ಟೆಂಬ‌ರ್ 3 ರಿಂದ 7ರವರೆಗೆ ನಡೆದ ಟೇಕ್ವಾಂಡೋ  ಕ್ರೀಡಾಕೂಟದಲ್ಲಿ ದೇಶದ ಹಲವು ರಾಜ್ಯಗಳ ಪ್ರತಿಭಾನ್ವಿತ ಆಟಗಾರರು ಭಾಗವಹಿಸಿದ್ದರು.

- Advertisement - 

17 ವರ್ಷದೊಳಗಿನ 32-35 ಕೆ.ಜಿ ವಿಭಾಗದಲ್ಲಿ ಹರ್ಷಿತಾ ಎಂ. ತೀವ್ರ ಪೈಪೋಟಿಯ ನಡುವೆಯೂ ತನ್ನ ದೃಢಸಂಕಲ್ಪದ ಆಟದ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ.

ಇದಕ್ಕೂ ಮುನ್ನ, ಪುಣೆಯಲ್ಲಿ ನಡೆದಿದ್ದ ದಕ್ಷಿಣ ವಲಯ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಂಸ್ಥೆಯ ಅಧ್ಯಕ್ಷ ಎ.ಸುಬ್ರಮಣ್ಯ ಅವರು ಹರ್ಷಿತಾರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ದೊಡ್ಡಬಳ್ಳಾ ಪುರ ತಾಲ್ಲೂಕಿನಿಂದ ಪ್ರಪ್ರಥಮವಾಗಿ ಸಿಬಿಎಸ್‌ಇ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದಿರುವುದು ಶಾಲೆ, ಪೋಷಕರು ಮತ್ತು ತಾಲ್ಲೂಕಿನ ಹೆಮ್ಮೆ ಎಂದು ಹೇಳಿದರು.

- Advertisement - 

ಪ್ರಾಂಶುಪಾಲ ರಮ್ಯ ಬಿ.ವಿ. ತಮ್ಮ ಶುಭಾಶಯಗಳನ್ನು ತಿಳಿಸಿ ದೇಶದ ವಿವಿಧ ರಾಜ್ಯಗಳಿಂದ ಬಂದ ಸ್ಪರ್ಧಿಗಳ ನಡುವೆಯೂ ಹರ್ಷಿತಾ ತೋರಿದ ಗೆಲುವು ಆಕೆಯ ಪರಿಶ್ರಮ ಮತ್ತು ದೃಢಸಂಕಲ್ಪದ ಪಲ ಎಂದು ಶ್ಲಾಘಿಸಿದರು. ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ತಂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

 

 

Share This Article
error: Content is protected !!
";