ಸಿರಿ ಕಂಫರ್ಟ್ ರೆಸ್ಟೋರೆಂಟ್ ಉದ್ಘಾಟಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ

News Desk
- Advertisement -  - Advertisement -  - Advertisement - 
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ರೋಜಿಪುರದಲ್ಲಿ ನೂತನವಾಗಿ ಪ್ರಾರಂಭವಾದ ಸಿರಿ ಕಂಫರ್ಟ್ ರೆಸ್ಟೋರೆಂಟನ್ನು ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಉದ್ಘಾಟಿಸಿದರು.
ದೊಡ್ಡಬಳ್ಳಾಪುರ ನಗರದ ರೋಜಿಪುರದ ಗೀತ ನಾರಾಯಣ ಸ್ವಾಮಿ ರವರ ಮಾಲೀಕತ್ವದಲ್ಲಿ ಕೋರ್ಟ್ ರಸ್ತೆಯಲ್ಲಿ ನೂತನ ಸಿರಿ ಕಂಫರ್ಟ್ ರೆಸ್ಟೋರೆಂಟ್ ಇಂದಿನಿಂದ ಪ್ರಾರಂಭವಾಗಿದೆ.
 ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೀ ನಾರಾಯಣ ಪೂಜಾ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿತು.
ನೂತನ ಸಿರಿ ಕಂಫರ್ಟ್ ರೆಸ್ಟೋರೆಂಟ್ ಅನ್ನು  ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಉದ್ಘಾಟಿಸಿದರು. ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ನಗರದ ಪ್ರಸಿದ್ಧ ರೆಸ್ಟೋರೆಂಟ್ ಆಗಲಿ ಎಂದು ಶುಭ ಹಾರೈಸಿದರು. ಇದಕ್ಕೂ ಮೊದಲು ಜೆಡಿಎಸ್ ಘಟಕದ
ಯುವ ಪ್ರಧಾನ ಕಾರ್ಯದರ್ಶಿ  ಗಗನ್ ಗೌಡ ಇವರ  ಮನೆಯಲ್ಲಿ ನಡೆದ ಲಕ್ಷ್ಮೀ ನಾರಾಯಣ ಪೂಜಾ ಕಾರ್ಯ ಕ್ರಮದಲ್ಲಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ ತಾಲೂಕಿನ ಸ್ನೇಹಿತರ ಬಳಗ ಮತ್ತು ಜೆಡಿಎಸ್ ಮುಖಂಡರು ಭಾಗವಹಿಸಿದರು. ಸಿರಿ ಕಂಫರ್ಟ್ ರೆಸ್ಟೋರೆಂಟ್ ಮಾಲೀಕರಾದ ಶ್ರೀಮತಿ
ಗೀತಾ ಎನ್.ನಾರಾಯಣ ಸ್ವಾಮಿ ಹಾಗೂ ಮಕ್ಕಳಾದ ಚೇತನ್. ಗಗನ್ ಗಣ್ಯರಿಗೆ ಸ್ವಾಗತ ಕೋರಿದರು.

Share This Article
error: Content is protected !!
";