ಚಂದ್ರವಳ್ಳಿ ನ್ಯೂಸ್, ಸಿರಿಗೆರೆ
ಭಾಷಾಶಾಸ್ತ್ರಜ್ಞರ ಪ್ರಕಾರ ಸಂಸ್ಕೃತ “ಇಂಡೋ ಐರೋಪ್ಯ ಭಾಷಾ ಕುಟುಂಬ” ಕ್ಕೆ ಸೇರಿದ್ದು, ಕನ್ನಡ “ದ್ರಾವಿಡ ಭಾಷಾ ಕುಟುಂಬ”ಕ್ಕೆ ಸೇರಿದ್ದು, ನಮ್ಮ ದೃಷ್ಟಿಯಲ್ಲಿ ಸಂಸ್ಕೃತ ಮತ್ತು ಕನ್ನಡದ ಸಂಬಂಧ ತಾಯಿ-ಮಗಳ ಸಂಬಂಧ ಅಲ್ಲ ಸಾಕುತಾಯಿ-ಸಾಕುಮಗಳ ಸಂಬಂಧ.
ಕಾಳಿದಾಸನು ಸಂಸ್ಕೃತದಲ್ಲಿ “ಕಖಗಘ” ಅಕ್ಷರಪುಂಜ ಬಳಸಿ ರಚಿಸಿದ “ಸಮಸ್ಯಾಪೂರ್ತಿ” ಶ್ಲೋಕ ಮತ್ತು ಅದನ್ನು ಆಧರಿಸಿ ಬರೆದ ನಮ್ಮ ಕನ್ನಡ ಕವಿತೆಯೊಂದಿಗೆ ಓದುಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು:
ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ।
ಕಿಂ ತೇ ಹಸ್ತೇ? ತಾಲೀ ಪತ್ರಂ
ಕಾವಾರೇಖಾ? “ಕಖಗಘ”||
(ಓ ಬಾಲೆ ನೀನಾರು? “ನಾನೋರ್ವ ಕನ್ನಡತಿ”
ನೀನಾರ ಮಗಳಮ್ಮ? “ಕನ್ನಡಾಂಬೆಯ ಕುವರಿ”|
ಏನಿಹುದು ಕೈಯೊಳಗೆ? “ತಾಡೋಲೆ ಗರಿಯು”
ಬರೆದಿರುವೆ ಏನಲ್ಲಿ? “ಸಿರಿಗನ್ನಡಂ ಗೆಲ್ಗೆ!”
“ಸಿರಿಗನ್ನಡಂ ಬಾಳ್ಗೆ!”)
–ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ.