ಪ್ರಜ್ವಲ್ ರೇವಣ್ಣ ಅವರ ಪೆನ್​​​​ಡ್ರೈವ್‌ಸಂಬಂಧ ದೋಷಾರೋಪಣ ಪಟ್ಟಿ ಸಲ್ಲಿಸಿದ ಎಸ್‌ಐಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಾಸನ:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್​​​​ಡ್ರೈವ್‌ಹಂಚಿಕೆ ಸಂಬಂಧ ಎಸ್‌ಐಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ಇದರಲ್ಲಿ ಪ್ರಮುಖರ ಹೆಸರುಗಳು ಕಣ್ಮರೆಯಾಗಿರುವ ಕುರಿತು ಚರ್ಚೆ ನಡೆದಿದೆ.

ಪೆನ್​​​ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಎಸ್‌ಐಟಿ 13,712 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

- Advertisement - 

ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ತಾಂತ್ರಿಕ ವರದಿ, ಎಫ್‌ಎಸ್‌ಎಲ್ ಸಾಕ್ಷಿಗಳ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ ಎಂದು ವಕೀಲ ಪೂರ್ಣಚಂದ್ರ ತಿಳಿಸಿದ್ದಾರೆ.

ಆರೋಪಿಗಳ ಪಟ್ಟಿ: ಎ1 ನವೀನ್, 2 ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್.ಎನ್, 3 ಚೇತನ್.ಬಿ.ಸಿ., 4 ಚೇತನ್.ವೈ.ಎಸ್, 5 ಲಿಖಿತ್‌ಗೌಡ, 6 ದೇವರಾಜೇಗೌಡ, 7 ಗಿರೀಶ್.ಎಸ್, 8 ಯೊಗೇಶ್.ವೈ.ಡಿ., 9 ನಿಶಾಂತ್, 10 ಹರೀಶ್.ಎಸ್.ಎನ್, 11 ಸುಮಂತ್, 12 ಕೃಷ್ಣೇಗೌಡ, 13 ಕಿರಣ್.ಎಸ್.ಕೆ, 14 ಶರತ್.ಎಂ.ಕೆ., 15 ತೇಜಸ್.ಡಿ.ಎನ್, 16 ಗಗನ್‌ಕುಮಾರ್, 17 ರೇವಂತ್, 18 ಶಿವಪ್ರಸಾದ್, 19 ನಾಗೇಂದ್ರ ಜೈನ್, 20 ವಸಂತ್‌ಕುಮಾರ್, 21 ಸಮೀರ್‌ಅಹ್ಮದ್, 22 ಬಾಲಸುಬ್ರಹ್ಮಣ್ಯ, 23 ಚಿರಂತ್, 24 ದೇವರಾಜ್.ಡಿ.ಹೆಚ್, 25 ಜಯಸೂರ್ಯ, 26 ಚಂದ್ರಶೇಖರ್.ಬಿ.ಕೆ., 27 ಕುಮಾರ್, 28 ದಿನೇಶ್.ಕೆ.ಕೆ., 29 ನವೀನ್‌ಕುಮಾರ್.ಎನ್.ವಿ., 30 ಪ್ರಶಾಂತ್.ಬಿ.ಎಸ್., 31 ಅನಿಲ್.ಹೆಚ್.ವಿ., 32 ಹರ್ಷವರ್ದನ್.ಹೆಚ್.ಎಂ., 33 ಅಕ್ಷಯ್‌ಕುಮಾರ್, 34 ಪ್ರವೀಣ್‌ಕುಮಾರ್, 35 ಹರೀಶ್.ಎನ್.ಸಿ., 36 ಶಶಾಂಕ್.ಹೆಚ್.ಎಂ., 37 ಭರತ್, 38 ಚೇತನ್​​ಕುಮಾರ್, 39 ಸೋಮಶೇಖರ್.ಕೆ.ಕೆ. ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

- Advertisement - 

ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವ ಇರುವವರೆಗೂ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಡಿಎನ್ಎ ಮತ್ತು ಡಿಜಿಟಲ್ ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ದಳಕ್ಕೆ ಹೈಕೋರ್ಟ್ ಕಳೆದ ಜನವರಿಯಲ್ಲಿ ಸೂಚಿಸಿತ್ತು.

ತಮಗೆ ವಿಧಿಸಲಾಗಿರುವ ಶಿಕ್ಷೆ ರದ್ದುಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಮತ್ತು ಟಿ.ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು.

 

 

Share This Article
error: Content is protected !!
";