ಚಂದ್ರವಳ್ಳಿ ನ್ಯೂಸ್, ದೆಹಲಿ:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ತರಾಟೆ ತೆಗೆದುಕೊಂಡರು.
ದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಕರ್ನಾಟಕ ಸರ್ಕಾರ ಮತ್ತು ಡಿಸಿಎಂ ಶಿವಕುಮಾರ್ ಅವರನ್ನು ನಿರ್ದಿಷ್ಟವಾಗಿ ರಾಷ್ಟ್ರೀಯ ಮಾಧ್ಯಮಗಳಿಗೆ ಅರ್ಥವಾಗುವುದಕ್ಕೋಸ್ಕರ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತಾಡಿದ ಅವರು ಚಾಮುಂಡಿಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಶಿವಕುಮಾರ್ ಹೇಳುತ್ತಾರೆ,
ಇತ್ತಿಚಿಗೆ ಅವರು ವಿಧಾನಸಭಾ ಆಧಿವೇಶನದಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ವಿವಾದ ಸೃಷ್ಟಿಸಿದ್ದರು. ಆದರೆ ಅವರು ಹಾಗೆ ಮಾಡಿದ್ದು ದೆಹಲಿಯಲ್ಲಿರುವ ವರಿಷ್ಠರನ್ನು ಕೆರಳಿಸಿತ್ತು ಎಂದು ಹೇಳಿದರು.
ಹೈಕಮಾಂಡ್ ಗಮನ ಆ ವಿಷಯದಿಂದ ಬೇರೆಡೆ ಸೆಳೆಯಲು ಶಿವಕುಮಾರ್ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಅರ್ಥವೇನು? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಾರವಾಗಿ ಪ್ರಶ್ನಿಸಿದರು.

