ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದರ ಬ್ರೇಕ್ ಫೇಲಾಗಿ ಅಪಘಾತಕ್ಕೀಡಾಗಿದ್ದು ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿರುವ ಘಟನೆ ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ತಂಗುದಾಣಕ್ಕೆ ನುಗ್ಗಿ ಬಸ್ಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ.
ಈ ದುರ್ಘಟನೆಯಲ್ಲಿ ಆಟೋ ಚಾಲಕ, ಒಂದು ಮಗು, ಬಾಲಕಿ, ಮೂವರು ಮಹಿಳೆಯರು ಸಾವನ್ನಪ್ಪಿ ದುರ್ವೈದಿವಗಳು.
ಆಟೋ ಚಾಲಕ ಹೈದರ್ (47), ಅವಮ್ಮಾ (72), ಖದೀಜಾ (60), ಹಸ್ನಾ(11), ನಫೀಸಾ (52), ಆಯಿಷಾ ಫಿದಾ (19) ಮೃತರಾಗಿದ್ದಾರೆಂದು ಗುರುತಿಸಲಾಗಿದೆ.
ಲಕ್ಷ್ಮಿ (61), ಸುರೇಂದ್ರ (39) ಗಾಯಗೊಂಡಿದ್ದಾರೆ. ಕೇರಳದ ಕಾಸರಗೋಡು ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಆಟೋ ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದು ದುರುಂತ ಸಂಭವಿಸಿದೆ. ಮೃತರ ಪೈಕಿ 3 ಮಹಿಳೆಯರು ಮತ್ತು ಓರ್ವ ಪುರುಷ ಒಂದೇ ಕುಟುಂಬದವರು ಎನ್ನಲಾಗಿದೆ.

