ಎಸ್ ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ರೇವಣ್ಣ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಸ್ ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ರೇವಣ್ಣ(75) ಅವರು ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಪುತ್ರಿ ಮತ್ತು ಮೂರು ಮಂದಿ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಚಿಕ್ಕಗೊಂಡನಹಳ್ಳಿಯಲ್ಲಿ ಸೋಮವಾರ ಸಂಜೆ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ರೇವಣ್ಣ ಯಾರು- ಚಿಕ್ಕಗೊಂಡನಹಳ್ಳಿ ರೇವಣ್ಣ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಶಿಕ್ಷಣಾಧಿಕಾರಿ ಒಂದೊಂದೇ ಮೆಟ್ಟಿಲು ಮೇಲೇರಿದವರು. ನಿವೃತ್ತಿಯ ನಂತರ ಎಸ್ ಜೆಎಂ ವಿದ್ಯಾಪೀಠದಲ್ಲಿ ಸುಮಾರು ಒಂದೂವರೆ ದಶಕದ ಕಾಲ ಕಾರ್ಯನಿರ್ವಹಣಾಧಿಕಾರಿಯಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದವರು.

ವೃತ್ತಿ ಬದ್ಧತೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ರೇವಣ್ಣ. ಭಾನುವಾರ ಸಂಜೆ ಅವರು ಲಿಂಗೈಕ್ಯರಾಗಿದ್ದಾರೆ. ಅವರ ಕುಟುಂಬಕ್ಕೆ ಶ್ರೀ ಮುರಘೇಶ ಮತ್ತು ಬಸವಾದಿ ಶರಣರ ಶುಭಾಶೀರ್ವಾದಗಳು ಯಾವತ್ತೂ ಇರಲೆಂದು ಆತ್ಮೀಯರು ಪ್ರಾರ್ಥಿಸಿದ್ದಾರೆ.

ಒಂದೂವರೆ ದಶಕಗಳು ವಿದ್ಯಾಪೀಠದಲ್ಲಿ ಅವರೊಂದಿಗೆ ಕಾರ್ಯ ನಿರ್ವಹಣಾ ನಿರ್ದೇಶಕನಾಗಿ ಕೆಲಸ ಮಾಡಿದ್ದು ಸುಂದರ ನೆನಪು. ಸಜ್ಜನರ ಸ್ಮರಣೆ ಸತ್ಕಾರ್ಯಗಳಿಗೆ ಪ್ರೇರಣೆ ಎಂದು ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಅವರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

 

 

Share This Article
error: Content is protected !!
";