ವೃತ್ತಿ ಜೀವನಕ್ಕೆ ಕೌಶಲ್ಯಾಭಿವೃದ್ಧಿ, ನಿರಂತರ ಕಲಿಕೆ ಮುಖ್ಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವೃತ್ತಿ ಜೀವನವು ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು
, ಆತ್ಮತೃಪ್ತಿ ಮತ್ತು ಆರ್ಥಿಕ ಭದ್ರತೆಯನ್ನು  ಒದಗಿಸುತ್ತದೆ ಎಂದು  ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎನ್ ಅಜಯ್ ಕುಮಾರ್ ಹೇಳಿದರು.

ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾ ವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಖಾಸಗಿ ವಲಯದಾಚೆ ವೃತ್ತಿ ಜೀವನ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೃತ್ತಿ ಜೀವನವು ವ್ಯಕ್ತಿಯೊಬ್ಬ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಳ್ಳುವ ಉದ್ಯೋಗ, ಕಾಯಕ ಅಥವಾ ತರಬೇತಿ ಪಡೆದ ಕ್ಷೇತ್ರ ವಾಗಿದೆ. ಇದು ಕೇವಲ ಆದಾಯದ ಮೂಲವಲ್ಲದೆ, ವ್ಯಕ್ತಿಗತ ಬೆಳವಣಿಗೆ, ಸಾಮಾಜಿಕ ಸ್ಥಾನಮಾನ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಪ್ರಕ್ರಿಯೆ ಎಂದು ಹೇಳಿದರು.

- Advertisement - 

ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಯಶಸ್ವಿ ವೃತ್ತಿ ಜೀವನಕ್ಕೆ ಕೌಶಲ್ಯ ಅಭಿವೃದ್ಧಿ, ನಿರಂತರ ಕಲಿಕೆ ಮತ್ತು ವೈಯಕ್ತಿಕ ಜೀವನದೊಂದಿಗೆ ಸಮತೋಲನ ಅತ್ಯಗತ್ಯ. ವೃತ್ತಿಜೀವನದಲ್ಲಿ ಒತ್ತಡ, ಸೋಲು ಮತ್ತು ಹತಾಶೆ ಸಾಮಾನ್ಯ. ಆದರೆ ಅವುಗಳನ್ನು ಎದುರಿಸುವ ಛಲ ಇರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಗೌರಪ್ಪ ಮಾತನಾಡಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಕೌಶಲ್ಯಗಳನ್ನು , ಗುರಿಗಳನ್ನು  ನಿಗದಿಪಡಿಸಿಕೊಳ್ಳುವುದು ಮತ್ತು ಅದಕ್ಕನುಗುಣವಾಗಿ ಯೋಜನೆ ರೂಪಿಸುವುದು ಅವಶ್ಯಕ ಎಂದು ಹೇಳಿದರು.

- Advertisement - 

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಮಧು ಶ್ರೀ, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಬಾಬು ಸಾಬಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಕಾಶ್, ಪ್ರಾಧ್ಯಾಪಕಿ ಭಾನು ಶ್ರೀ, ಡಾ.ನೀರಜ್ ಮತ್ತಿತರರು ಹಾಜರಿದ್ದರು.

Share This Article
error: Content is protected !!
";