ಜಿಟಿಟಿಸಿ ಕೇಂದ್ರದಿಂದ ಕೌಶಲ್ಯ ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ವತಿಯಿಂದ ಯುವನಿಧಿ ಯೋಜನೆಯಡಿ ನೋಂದಾಯಿತರಾಗಿರುವ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಾಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಿಪ್ಲೋಮಾ/ ಬಿ./ ಬಿ.ಟೆಕ್/ಎಂ./.ಟೆಕ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಉದ್ಯೋಗಗಳ ಅನ್ವೇಷಣೆಗೆ ಸಹಾಯ ಮಾಡಲು ಸಂಬಂಧಿಸಿತ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸಲು ತರಬೇತಿ ನೀಡಲಾಗುವುದು.

ಕೌಶಲ್ಯವರ್ಧನೆ ಕೋರ್ಸ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೆಲಸ ದೊರಕಿಸಲು ಜಿಟಿಟಿಸಿ ವತಿಯಿಂದ ನಿಗದಿತ ಸಂದರ್ಶನಗಳನ್ನು ನೆಡಸಲಾಗುತ್ತದೆ. ತರಬೇತಿಯ ಸಮಯದಲ್ಲಿ ಸರ್ಕಾರವು ಪಾವತಿಸುವ ಯುವನಿಧಿ ಸ್ಟೈಫಂಡ್ ಅವರ ವೇಳಾ ಪಟ್ಟಿಯ ಪ್ರಕಾರ ಮುಂದುವರಿಯುತ್ತಿದೆ.

ಆಸಕ್ತರು ಚಿತ್ರದುರ್ಗ ನಗರದ ಹಳೆಯ ಪಿ.ಬಿ. ರಸ್ತೆ ಕಣಿವೆ ಮಾರಮ್ಮ ದೇವಸ್ಥಾನದ ಎದುರು, ಕುಂಚಿಗನಾಳ್ನಲ್ಲಿರುವ ಜಿ.ಟಿ.ಟಿ.ಸಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9738465834, 86602703535 ಕರೆ ಮಾಡಬಹುದು ಎಂದು ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";