ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಾರು ಬಂಡಿ
ಜೀವ ಜಗದ ಜಾರು ಬಂಡಿ
ಏರಿಳಿಯುವ ಜಾರು ಬಂಡಿ
ಬೇಸರದ ಹೊರೆ ಇಳಿಸಿ
ಸಂಭ್ರಮದ ಹೊನಲು ಹರಿಸುವ
ಜಾರು ಬಂಡಿ
ಗಾಳಿ ಪಟದಂತೆ
ಆಸೆಯ ಹುಟ್ಟಿಸಿ ,
ಇನ್ನೇನು ಮುಗಿಲು ಮುಟ್ಟಿತು
ಏನುವಷ್ಟರಲಿ ಧರೆಗುರುಳಿಸುವ
ಜಾರು ಬಂಡಿ
ಜಗದ ನಿಯಮ
ಇಂದಿರಲು ಹೀಗೆ
ಮರೆಯಬೇಡ ಮನುಜ
ಜಾರಿ ಜಾರಿ
ನೆಲ ಮುಟ್ಟುವೆ ಒಮ್ಮೆ
ಎಂದು ಸಾರಿ ಸಾರಿ ಹೇಳುವ
ಜಾರು ಬಂಡಿ
ಮೇಲೆತ್ತರಕೆ ಏರಿಸಿ
ಎಂದೂ ಬಾರದ ಜಗಕೊಯ್ದು
ಜನುಮದ ಜೀವನ ನಾಟಕಕೆ
ಪರದೆ ಎಳಿಸಿ ಮುಕ್ತಾಯದ
ಮಡಿಲು ಸೇರಿಸುವ
ಜಾರುಬಂಡಿ
ಕವಿತೆ:ಗುರಾನಿ, ದಾವಣಗೆರೆ, 9036389240

