ಪೋಕ್ಸೋ ಕಾಯ್ದೆ ತೀವ್ರತೆ, ಅಪಾಯ ಏನು ಎನ್ನುವುದನ್ನು ಅರಿಯಬೇಕು-ಸಣ್ಣ ರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಪಿಎಚ್‌ಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೌಷ್ಠಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ಅವರು ಪಿಎಚ್‌ಸಿ ಐಮಂಗಲಕ್ಕೆ ಭೇಟಿ ನೀಡಿ, ಪಿಎಚ್‌ಸಿ ಐಮಂಗಲದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ANC, PNC ಮತ್ತು ಸಾರ್ವಜನಿಕರಿಗೆ ನಿರ್ಜಲೀಕರಣದ ತೊಡಕುಗಳು, ನಿವಾರಾಣೆ, ತಡೆಗಟ್ಟುವಿಕೆ, ಚಿಕಿತ್ಸೆ, ORS CORNER ಬಳಕೆ, ORS ಮತ್ತು Zink  ಬಳಕೆ ಬಗೆಗೆ ಮಾಹಿತಿ, ಶಿಕ್ಷಣ ನೀಡಿ, ಬಾಲ್ಯ ವಿವಾಹ , POSCO ವಿಷಯವಾಗಿ ಮಾಹಿತಿ ಶಿಕ್ಷಣ ನೀಡಿದರು.

ಮುಂದುವರೆದು ಮಾತನಾಡಿದ ಸಣ್ಣ ರಂಗಮ್ಮ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಹೆಣ್ಣ ಮಕ್ಕಳ ಮೇಲೆ ಅತ್ಯಾಚಾರ ಎಸಗಿದರೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಾಗುತ್ತದೆ.

- Advertisement - 

ಅಲ್ಲದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ. ಶಿಕ್ಷೆಯ ಪ್ರಮಾಣವು ಅಪರಾಧದ ತೀವ್ರತೆ ಅವಲಂಬಿಸಿರುತ್ತದೆ ಮತ್ತು ಜೈಲು ಶಿಕ್ಷೆ, ದಂಡ ಅಥವಾ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಕೂಡಾ ವಿಧಿಸಬಹುದಾಗಿದೆ ಎಂದು ಅವರು ಎಚ್ಚರಿಸಿದರು.

ಅಪ್ರಾಪ್ತದ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಅಶ್ಲೀಲ ಚಿತ್ರಗಳಿಗಾಗಿ ಮಕ್ಕಳನ್ನು ಬಳಸಿದಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

- Advertisement - 

ಎರಡನೇ ಬಾರಿ ಅಪರಾಧ ಸಾಬೀತಾದರೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು. ಮಕ್ಕಳ ಅಶ್ಲೀಲ ಛಾಯಾಚಿತ್ರಗಳನ್ನು ಸಂಗ್ರಹಿಸುವುದು ಅಥವಾ ಹಂಚಿಕೊಳ್ಳುವುದು ಕಂಡ ಬಂದಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ ಎಂದು ಸಣ್ಣರಂಗಮ್ಮ ಅವರು ಹೇಳಿದರು.

ಡಾ.ವಿಜಯ್.ಸಿ ಮಾತನಾಡಿ ಪೋಕ್ಸೋ ಕಾಯ್ದೆಯು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮಕ್ಕಳನ್ನು ರಕ್ಷಿಸುತ್ತದೆ.

ಪೋಕ್ಸೋ ಕಾಯ್ದೆಯಡಿಯಲ್ಲಿ, ವಿಚಾರಣೆಗಾಗಿ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ, ಇದರಿಂದ ಮಕ್ಕಳು ಸುರಕ್ಷಿತ ಮತ್ತು ಬೆಂಬಲಿತ ವಾತಾವರಣದಲ್ಲಿ ತಮ್ಮ ಹೇಳಿಕೆಗಳನ್ನು ನೀಡಬಹುದು. ಪೋಕ್ಸೋ ಕಾಯ್ದೆಯು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕೈಗೊಂಡ ಮಹತ್ವದ ಕ್ರಮವಾಗಿದೆ ಎಂದು ಅವರು ತಿಳಿಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

 

Share This Article
error: Content is protected !!
";