ಹಾಸ್ಟೆಲ್ ಗೆ ದಿಢೀರ್ ಭೇಡಿ ನೀಡಿದ ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಣ್ಣಪ್ಪ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿಧ್ಯಾರ್ಥಿ ನಿಲಯಕ್ಕೆ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಣ್ಣಪ್ಪ ರವರು  ವಿಧ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಅಡುಗೆ ಕೋಣೆ ವೀಕ್ಷಿಸಿದರು.

ಹಾಸ್ಟೆಲ್ ನಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ಆಹಾರದ ಗುಣಮಟ್ಟ ತೀವ್ರ ಕಡಿಮೆ ಮಟ್ಟದಲ್ಲಿರುವುದು ಹಾಗೂ ನೀರಿನ ಸಂಪು ಬಹಳ ದಿನಗಳಿಂದ ಸ್ವಚ್ಛತೆ ಮಾಡದೆ ಇರುವುದು ವೀಕ್ಷಿಸಿ ಕೆಂಡಮಂಡಲವಾದ ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದರು.

- Advertisement - 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು 2021-22ನೇ ಸಾಲಿನ ಪುಸ್ತಕಗಳು ಮಾತ್ರ ಲಭ್ಯವಿದ್ದು  ಹಾಗೂ ಉಪಹಾರದ ಗುಣಮಟ್ಟತೆ ಇಲ್ಲದಿರುವುದು ಮತ್ತು ಸ್ವಚ್ಛತೆ ಹಾಗೂ ಅಶುದ್ಧತೆ ನೀರಿನ ಬಗ್ಗೆ ಹಾಗೂ ವಿದ್ಯಾರ್ಥಿ ನಿಲಯದಲ್ಲಿರುವ ಇನ್ನಿತರೆ ಸಮಸ್ಯೆಗಳನ್ನು ಸ್ಥಾಯಿ ಸಮಿತಿ ಅಧ್ಯಕ್ಷರ ಮುಂದೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಹೆಚ್.ಟಿ.ಸುನೀಲ್ ಕುಮಾರ್, ಸಂಧ್ಯಾ ವೈ.ಎಸ್, ಆಶೋಕ್ ಕುಮಾರ್ .ಎಸ್. ಮಹಾಲಿಂಗರಾಜು, ನಯಾಜ್ ಶರೀಫ್ ಮತ್ತು ದಫೇದಾರ್ ಗಳು ಉಪಸ್ಥಿತಿಯಲ್ಲಿದ್ದರು.

- Advertisement - 

Share This Article
error: Content is protected !!
";