ಯುವ ಪೀಳಿಗೆ ಉತ್ತಮ ಭವಿಷ್ಯ ರೂಪಿಸಿ- ಸಮಾಜ ಸೇವಕ ಅಬ್ದುಲ್

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಮೊರಬನಳ್ಳಿ ಗ್ರಾಮದಲ್ಲಿ
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ರಾಷ್ಟ್ರೀಯ ಸ್ವಯಂ ಸೇವ‍ಯೋಜನೆ ವತಿಯಿಂದ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ “ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಯ ಮಹತ್ವ” ಕುರಿತು ಸಮಾಜ ಸೇವಕರು ಹಾಗೂ ಸ್ನೇಹಿತರ ಬಳಗದ ಅಧ್ಯಕ್ಷ  ಅಬ್ದುಲ್ ರೆಹಮಾನ್ ರವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ
ಪ್ರತಿಯೊಬ್ಬರೂ ಸ್ವಯಂ ಆರೋಗ್ಯದ ಕುರಿತು ಕಾಳಜಿ ಹೊಂದಿರಬೇಕು
, ಅದಕ್ಕಾಗಿ ವೈಯ್ಯಕ್ತಿಕ ಸ್ವಚ್ಛತೆ ಪಾಲಿಸಬೇಕು. ಮನೆಯ ಹೊಳಗೆ ಹೊರಗಿನ ವಾತಾವರಣದಲ್ಲಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ತದನಂತರ ಗ್ರಾಮ ಅಥವಾ ನಗರ ಸ್ವಚ್ಛತೆ ಬಗ್ಗೆ ಕಾಳಜಿ ಹೊಂದಬೇಕು, ಅಂದಾಗ ಮಾತ್ರ ದೇಶವೇ ನೈರ್ಮಲ್ಯಯಿಂದ ಇರಲು ಸಾಧ್ಯ ಎಂದರು. 

ಈಗಿನ ಯುವ ಪೀಳಿಗೆಯೇ, ನಾಳಿನ ಭವಿಷ್ಯದ  ಭವ್ಯ ಉಜ್ವಲ ಭಾರತದ ನಿರ್ಮಾತೃಗಳಾಗಿದ್ದಾರೆ.  ಉಧ್ಯೋಗ ಹೊಂದುವುದು ಮಾತ್ರವಲ್ಲ, ಸಮಾಜ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.  ವಿದ್ಯಾರ್ಥಿಗಳು  ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಬಾರದು, ಸನ್ನಡತೆ ಹಾಗೂ  ನಿರಂತರ ಉತ್ತಮ ವ್ಯಾಸಂಗ ಯಶಸ್ವಿ ವಿದ್ಯಾರ್ಥಿಯಾಗಲು ಸಹಕಾರಿ.

 ಈ ಮೂಲಕ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೆಮ್ಮರವಾಗಿ ಬೆಳೆದು ನಿಲ್ಲಬೇಕು. ಸಮಾಜಕ್ಕೆ  ಜನ ಸಾಮಾನ್ಯರಿಗೆ ಸಾಮಾನ್ಯರಿಗೆ ಆಸರೆಯಾಗಿ ನಿಲ್ಲಬೇಕು. ಹೆತ್ತವರಿಗೆ ಪೋಷಕರಿಗೆ ಗೌರವ ತಂದು ಕೊಡಬೇಕು ಎಂದರು.
ಪ್ರತ್ಯಕ್ಷ ದೇವರುಗಳೆಂದರೆ ತಂದೆ ತಾಯಿಗಳು
, ಅವರನ್ನು ಗೌರವದಿಂದ ಪ್ರೀತಿಸಿ ಆರಾಧಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ
ಕೆ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್  ಶಿಭಿರಾಧಿಕಾರಿ ಎಂ.ಸಿ. ಜಗದೀಶ, ಕಚೇರಿ ಅಧೀಕ್ಷಕ ಎನ್. ಪೆದ್ದಣ್ಣ, ಮ್ಯಾಕಾನಿಕಲ್ ವಿಭಾಗದ ಟಿ. ಜಗದೀಶ ವೇದಿಕೆಯಲ್ಲಿದ್ದರು.

ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಗ್ರಾಮದ ಪ್ರಮುಖರು ಮತ್ತು ಶಿಬಿರದ ಶಿಬಿರಾರ್ಥಿಗಳು  ಪಾಲ್ಗೊಂಡಿದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";