ಚಂದ್ರವಳ್ಳಿ ನ್ಯೂಸ್, ಪಾವಗಡ:
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊತ್ತುರು ಎಂಬ ಗ್ರಾಮದಲ್ಲಿ ಕುಂಚಿಟಿಗ ಸಮುದಾಯದ ಶ್ರೀ ಚಿಕ್ಕರಂಗಪ್ಪನವರ ಮಗನಾಗಿ ರಂಗಾಯಣ ರಘು(ರಘುನಾಥ್) ಜನಿಸಿದರು.
ಅವರು ಪ್ರೌಢಶಾಲೆ ಓದುವ ಸಮಯದಲ್ಲಿ ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದರು. ಮುಂದೆ ಅವರು ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿಗೆ ಸೇರಿಕೊಂಡಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗುತ್ತಿದರು.
ಚಂದ್ರಶೇಖರ ಕಂಬಾರರ ಅವರ ಒತ್ತಾಸೆಯಿಂದ ರಂಗಾಯಣಕ್ಕೆ ಸೇರ್ಪಡೆಗೊಂಡ ರಘು ಮುಂದೆ ರಂಗಾಯಣ ರಘು ಆಗಿದ್ದು ಒಂದು ಇತಿಹಾಸ. ಅವರ ಬದುಕು ಅರಳಿದ್ದು ರಂಗಾಯಣದಲ್ಲಿ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ರಘು ಅವರಿಗೆ ಅಂದಿನ ಅನುಭವಗಳು ರೋಮಾಂಚನ ನೀಡುವಂತಹ ಸಂಗತಿಗಳಾಗಿವೆ.
ರಂಗಾಯಣಕ್ಕೆ ಆಕರ್ಷಿತರಾದ ರಘು ಅವರು ಕಥೆ, ಕಾದಂಬರಿಗಳ ಜೊತೆಗೆ ಯೋಗ, ಮಾರ್ಷಲ್ ಆರ್ಟ್ಸ್ ಮುಂತಾದ ಅನೇಕ ಕಲೆಗಳನ್ನೂ ತಮ್ಮ ಜ್ಞಾನದ ಬುಟ್ಟಿಗೆ ತುಂಬಿಕೊಂಡರು.
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸುಗ್ಗಿ ಎಂಬ ಚಿತ್ರ ನಿರ್ಮಿಸಿದ್ದರು. ಆ ಚಿತ್ರದ ಮೂಲಕ ಚಲನಚಿತ್ರದಲ್ಲಿ ರಘು ಅಭಿನಯಿಸಿದರು. ಖ್ಯಾತ ಕನ್ನಡ ಚಿತ್ರರಂಗದ ನಟ ಸುದೀಪ್ ನಾಯಕನಾಗಿರುವ ಧಮ್ ಚಿತ್ರದಲ್ಲಿ ರಘು ಅವರಿಗೆ ಖಳನಟನಾಗಿ ಅವಕಾಶ ದೊರಕಿತು. ಅಲ್ಲಿಂದ ಅವರಿಗೆ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಅವಕಾಶಗಳು ದೊರೆಯುತ್ತಿವೆ. ನಂತರ ಮಣಿ ಮತ್ತು ದುನಿಯಾ ಚಿತ್ರಕ್ಕೆ ಅವಕಾಶ ಸಿಕ್ಕಿತು. ದುನಿಯಾ ಚಿತ್ರದ ಅಭಿನಯ ಸಾಕಷ್ಟು ಜನಪ್ರಿಯ ಪಡೆದಿದೆ. ಅವರ ಅಭಿನಯಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಇನ್ನಿತರ ಪ್ರಶಸ್ತಿಗಳು ಸಂದಿವೆ.
ಕನ್ನಡ ಚಿತ್ರಗಳಲ್ಲಿ ರಂಗಾಯಣ ರಘು ಅವರು ನಿರಂತರವಾಗಿ ಅಭಿನಯ ಮಾಡುತ್ತಿದ್ದಾರೆ. ಅವರ ಅಭಿನಯದ ಯಶಸ್ಸು ನಿರಂತವಾಗಿ ಅವರಿಗೆ ಸಿಗಲಿ ಎಂದು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆಶಿಸುತ್ತೇನೆ.
ರಂಗಾಯಣ ರಘು ಅವರು ನಮ್ಮ ಸಂಬಂಧಿಕರು ಹೌದು. ಏ.16ರಂದು ಬುಧುವಾರ ಕೊತ್ತುರು ಗ್ರಾಮದಲ್ಲಿ ಕರಿಯಮ್ಮ ದೇವಿಯ ಊರಹಬ್ಬಕ್ಕೆ ರಘು ಅವರ ಸಹೋದರ ಮಗ ದಿನೇಶ್ ಅವರ ಆಹ್ವಾನದ ಮೇರೆಗೆ ನನ್ನೊಂದಿಗೆ ನನ್ನ ಬಂಧುಗಳು ಬಾಡೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಿಯಮ್ಮ ದೇವಿಯ ಕೃಪೆಗೆ ಪಾತ್ರರಾದೆವು ಎಂದು ರಘು ಗೌಡ ತಿಳಿಸಿದ್ದಾರೆ.