ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಅಪ್ಪನ ಭ್ರಷ್ಟಾಚಾರಕ್ಕೆ ಮಗನೇ ಸಾಕ್ಷಿ! ಎಂದು ಜೆಡಿಎಸ್ ಆರೋಪ ಮಾಡಿದೆ.
ಶೇ 60 ಪರ್ಸೆಂಟ್‌ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ, ಕಮಿಷನ್‌ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಲಂಚಾವತಾರವನ್ನು ಸ್ವತಃ ಯತೀಂದ್ರ ಸಿದ್ದರಾಮಯ್ಯ ಅವರೇ ಸದನದಲ್ಲೇ ಬಹಿರಂಗ ಪಡಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಈ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಸುಪುತ್ರ, ವಿಧಾನ ಪರಿಷತ್‌ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಬಗರ್‌ಹುಕ್ಕುಂ ಸಮಿತಿಗೆ ಅರ್ಜಿ ಹಾಕಿದ್ದರೂ ಸಾಗುವಳಿ ಚೀಟಿಗೆ ಖಾತೆ ನೀಡಲು ಲಂಚ ಕೊಟ್ಟರಷ್ಟೇ ಮಾಡಿಕೊಡಲಾಗುತ್ತಿದೆ. ಲಂಚ ಕೊಡದಿದ್ದರೇ ವಿಳಂಬ ಮಾಡಲಾಗುತ್ತಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಸುಪುತ್ರ, ವಿಧಾನ ಪರಿಷತ್‌ಸದಸ್ಯ ಯತೀಂದ್ರ ಅವರು ಕಂದಾಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತೆರೆದಿಟ್ಟಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.