ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆ.ಎನ್. ರಾಜಣ್ಣ ಭೇಟಿ ಕುರಿತು ವಿಪ ಸದಸ್ಯ, ರಾಜಣ್ಣ ಪುತ್ರ ರಾಜೇಂದ್ರ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಸದಸ್ಯರಾದ ರಾಜಣ್ಣ ಅವರನ್ನು ಭೇಟಿಮಾಡಿ ಚರ್ಚಿಸುವುದು ಸಹಜ ಪ್ರಕ್ರಿಯೆ.
ಪ್ರಮುಖ ವಿಚಾರಗಳಿದ್ದಾಗ ಭೇಟಿ ಮಾಡುವುದು ಸಾಮಾನ್ಯ. ಇಬ್ಬರು ನಾಯಕರ ಭೇಟಿ ಸಂದರ್ಭದ ಚರ್ಚೆಯ ವಿಷಯ ಮಾಹಿತಿ ಇಲ್ಲ, ಇದು ಖಾಸಗಿ ಭೇಟಿ ಎಂದು ಅವರು ತಿಳಿಸಿದ್ದಾರೆ ಎಂದು ರಾಜೇಂದ್ರ ಹೇಳಿದರು.
ಈಗಾಗಲೇ ರಾಜಣ್ಣ ಅವರು ಸಿದ್ದರಾಮಯ್ಯನವರ ಪರ ಇರುವುದಾಗಿ ಗಟ್ಟಿಯಾಗಿ ತಮ್ಮ ಹಿಂದಿನ ಮಾತಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರಂತಹ ಸಿದ್ದರಾಮಯ್ಯ ಆಪ್ತರನ್ನು ಭೇಟಿಯಾಗುವುದು ಪಕ್ಷದ ಅಧ್ಯಕ್ಷರಾಗಿ ಸಹಜ ಪ್ರಕ್ರಿಯೆ. ಇದು ವಿಶ್ವಾಸ ಗಳಿಸುವ ಪ್ರಯತ್ನದ ಭಾಗವಲ್ಲ, ಬದಲಾಗಿ ಸಾಮಾನ್ಯ ರಾಜಕೀಯ ಮಾತುಕತೆ ಎಂದು ರಾಜೇಂದ್ರ ತಿಳಿಸಿದ್ದಾರೆ.

