ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸಿದ್ದಾರಮಯ್ಯ ಮತ್ತು ಡಿ.ಕೆ ಶಿವಕುಮಾರ್ ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಭಾರತದ ಸೂಪರ್ ಸಿಎಂ ಸುರ್ಜೇವಾಲಾ ಆಳ್ವಿಕೆ ಮಾಡುತ್ತಿದ್ದಾರೆ. ಕರ್ನಾಟಕವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆದೇಶದ ಮೇರೆಗೆ ಹರಿಯಾಣದ ಸುರ್ಜೇವಾಲಾರಿಗೆ ಒಪ್ಪಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸೂಪರ್ ಸಿಎಂ ಸುರ್ಜೇವಾಲಾ ಸಚಿವರ ಜೊತೆ ಮಾತ್ರವಲ್ಲ, ಸಂವಿಧಾನಬಾಹಿರವಾಗಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಅಧಿಕಾರವನ್ನು ಅವರಿಗೆ ನೀಡಿದವರು ಯಾರು?
ಕಳೆದ ಎರಡು ವರ್ಷದಲ್ಲಿ ಅಸಲಿಗೆ ರಾಜ್ಯದಲ್ಲಿ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ! ದೆಹಲಿ ‘ಕೈ‘ ಕಮಾಂಡ್ ಕರ್ನಾಟಕವನ್ನು ATM ಸರ್ಕಾರ ಮಾಡಿಕೊಂಡು ಅದರ ಉಸ್ತುವಾರಿ ನೋಡಲು ಸುರ್ಜೇವಾಲಾರನ್ನು ನೇಮಿಸಿದ್ದಾರೆ. ಸಿದ್ದರಾಮಯ್ಯ ಉಸ್ತುವಾರಿಗಳ ಆದೇಶವನ್ನು ಕೇಳುವ ವಾಚ್‌ಮ್ಯಾನ್ ಆಗಿ ಉಳಿದಿದ್ದಾರೆ. ಈ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಕಿಡಿಕಾರಿದರು.

