ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯಾಷನಲ್‌ಹೆರಾಲ್ಡ್‌ಹಗರಣ ಪ್ರಕರಣದಲ್ಲಿ ಸೋನಿಯಾ ಗಾಂಧಿ ನಂಬರ್-1 ಆರೋಪಿ ಮತ್ತು ರಾಹುಲ್‌ಗಾಂಧಿ ನಂಬರ್-2 ಆರೋಪಿ ಆಗಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ನ್ಯಾಷನಲ್‌ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಮ-ಮಗನ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್‌ಗೆ ಚಾರ್ಜ್‌ಶೀಟ್‌ಸಲ್ಲಿಸಿದೆ.
ಸೋನಿಯಾ ಮತ್ತು ರಾಹುಲ್ ಗಾಂಧಿ ಒಡೆತನದ ಖಾಸಗಿ ಕಂಪನಿಗಳಾದ “ಯಂಗ್‌ಇಂಡಿಯನ್” ಮತ್ತು “ಎಜೆಎಲ್”ಗೆ ಸೇರಿದ 2,000 ಕೋಟಿ ಬೆಲೆ ಬಾಳುವ ಆಸ್ತಿಗಳನ್ನು ಕೇವಲ 50 ಲಕ್ಷಕ್ಕೆ ತನ್ನದಾಗಿಸಿಕೊಂಡು, ಅಕ್ರಮವಾಗಿ ಹಣದ ವಹಿವಾಟು ನಡೆಸಿರುವ ಬಗ್ಗೆ ಇಡಿ(ED) ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಜೆಡಿಎಸ್ ದೂರಿದೆ.