ಶೀಘ್ರವೇ ಪೊಲೀಸ್ ಠಾಣೆ ಆರಂಭ-ಶಾಸಕ

News Desk

ಚಂದ್ರವಳ್ಳಿ ನ್ಯೂಸ್, ಸಾಗರ :
ತಾಲೂಕಿನ ಬಾರಂಗಿ ಹೋಬಳಿಯ ಕಟ್ಟಿನಕಾರಿಗೆ ಪೋಲೀಸ್ ಠಾಣೆ ನೀಡಬೇಕು ಎನ್ನುವ ಮನವಿ ಆ ಭಾಗದ ಜನರು ನೀಡಿದ್ದಾರೆ ಈ ಬಗ್ಗೆಯೂ ಕೂಡ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದು
, ಆದಷ್ಟು ಬೇಗ ಅದು ಈಡೇರುವ ಭರವಸೆ ಇದೆ. ಸಾಗರ ನಗರ ಪೋಲೀಸ್ ಠಾಣೆಯ ಹೊಸ ಕಟ್ಟಡಕ್ಕೆ ಈಗಾಗಲೆ ಅನುಮೋದನೆಯಾಗಿದ್ದು ಸ್ವಲ್ಪದಿನದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಇಲ್ಲಿನ ಡಿವೈಎಸ್‌ಪಿ ಕಚೇರಿಯಲ್ಲಿ ಕಾರ್ಗಲ್ ಠಾಣೆಗೆ ನೂತನ ಪೊಲೀಸ್ ಜೀಪ್ ಸೇವೆಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕಾರ್ಗಲ್, ಜೋಗ, ಬಾರಂಗಿ ಹೋಬಳಿ ಸಹಿತ ಒಟ್ಟು ೧೭೦ ಕಿಲೋಮೀಟರ್ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯಲ್ಲಿ ಹಳೆಯದಾದ ವಾಹನವು ಇದ್ದಿದ್ದನ್ನು ಗಮನಿಸಿ, ತುರ್ತು ಸಂದರ್ಭದಲ್ಲಿ ಪೋಲೀಸರಿಗೆ ಕಷ್ಟವಾಗುತ್ತಿದ್ದುದರಿಂದ ಹೊಸ ವಾಹನವನ್ನು ನೀಡಲಾಗುತ್ತಿದೆ ಎಂದರು.

ಈಗಾಗಲೆ ಕ್ಷೇತ್ರದ ಆನಂದಪುರ ಠಾಣೆಗೆ ಹಾಗೂ ರಿಪ್ಪನಪೇಟೆ ಠಾಣೆಗೂ ಸಹ ಹೊಸ ಪೊಲೀಸ್ ಜೀಪ್ ನೀಡಲಾಗುತ್ತಿದೆ. ಕಾರ್ಗಲ್ ಠಾಣೆಗೆ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಪೊಲೀಸ್ ಕ್ವಾಟ್ರ್ರಸ್‌ನ್ನೂ ಕೂಡ ಕಟ್ಟಲಾಗುತ್ತಿದೆ. ಆಂನಂದಪುರ ಹಾಗೂ ಹೊಸನಗರದಲ್ಲೂ ಕ್ವಾಟ್ರಸ್ ಕಾಮಗಾರಿ ನಡೆಸಲಾಗಿದೆ ಎಂದರು.

  ಸಾಗರ ಪೊಲೀಸ್ ವಸತಿ ಗೃಹ ಹಳೆಯದಾಗಿದ್ದು ಅದು ನೂತನವಾಗಿ ಕಟ್ಟಲು ನೀಲಿನಕ್ಷೆಯನ್ನು ತಯಾರು ಮಾಡಬೇಕಾಗಿದೆ ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ ಕುಮಾರ್ ಮಾತನಾಡಿ, ಸಾಗರದ ಶಾಸಕರು ಪೊಲೀಸರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ಮಾಡುತ್ತಿದ್ದು, ಈಗಾಗಲೆ ಮೂರು ಕಡೆಗಳಲ್ಲಿ ನೂತನ ಜೀಪ್ ನೀಡಿದ್ದಾರೆ. ಕಾರ್ಗಲ್ ಠಾಣೆಗೆ ಅತ್ಯಂತ ಅಗತ್ಯವಾಗಿ ವಾಹನದ ಸೌಲಭ್ಯ ಬೇಕಾಗಿತ್ತು ಅದು ಈಗ ಪೂರೈಕೆಯಾಗಿದೆ ಎಂದರು.

ಡಿಎಸ್ಪಿ ಗೋಪಾಲಕೃಷ್ಣ ನಾಯಕ್,ಸಿಪಿಐ ಮಹಾಬಲೇಶ್ವರ ನಾಯ್ಕ್, ಸೀತಾರಾಮ್, ಎಸ್ ಐ ಗಳು ಹಾಜರಿದ್ದರು.

- Advertisement -  - Advertisement - 
Share This Article
error: Content is protected !!
";