ಸೋಫಿಯಾ ಶೇರು ಮತ್ತು ಮಗು ಕಣ್ಮರೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಎಮ್.ಆರ್.ನಗರದ ಸೋಫಿಯಾ ಗಂಡ ಶೇರು (23) ಹಾಗೂ ಅವರ 3 ವರ್ಷದ ಮಗ ಹಸೈನ್ ಕಾಣೆಯಾದ ಕುರಿತು ಡಿ.24 ರಂದು ಚಿತ್ರದುರ್ಗ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ  ಸೋಫಿಯಾ ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಗದ್ದದ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪು ಕಲರ್ ಬುರ್ಖಾ ಮತ್ತು ಕೆಂಪು ಕಲರ್ ವೇಲ್ ಧರಿಸಿರುತ್ತಾರೆ. ಮಗ ಹಸೈನ್ 3 ಅಡಿ ಎತ್ತರದ್ದು, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಗೋಲ್ಡ್ ಕಲರ್ ಕೊಟು ಮತ್ತು ಪ್ಯಾಂಟ್, ಬಿಳಿಕಲರ್ ಶರ್ಟ್ ಧರಿಸಿರುತ್ತಾನೆ.

- Advertisement - 

ಕಾಣೆಯಾದವರು ಗುರುತು ಪತ್ತೆಯಾದಲ್ಲಿ, ಪೊಲೀಸ್ ಉಪಾಧೀಕ್ಷಕರು ಚಿತ್ರದುರ್ಗ ಉಪವಿಭಾಗ ದೂರವಾಣಿ ಸಂಖ್ಯೆ 08194-222430, 9480803120, ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂಬರ್ 08194-222782 ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";