ಗಮನ ಸೆಳೆದ ಶತ ಕಂಠದ ಗೀತಗುಚ್ಚ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಳ್ಳಿ ಸೂಗಡಿನ ರಂಗ ಕಲೆ ಜಾನಪದ ಸೂಭಾನೆ ಪದ ಅಳಿವಿನ ಅಂಚಿನಲ್ಲಿರುವ ಸಂದರ್ಭದಲ್ಲಿ ಬೆಂಗಳೂರಿನ ರಂಗ ಸಂಸ್ಥಾನ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಲಾ ಸಂಸ್ಕೃತಿ ಉತ್ಸವ ಕಲಾವಿದರಿಂದ ಏಕ ಕಾಲಕ್ಕೆ 120ಕ್ಕೂ ಹೆಚ್ಚು ಕಲಾವಿದರು ಕನ್ನಡದ ಮಹತ್ವದ ಗೀತಗುಚ್ಛವನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು.

 ನಗರದ ಡಾ.ರಾಜ್‌ಕುಮಾರ್‌ಕಲಾ ಮಂದಿರದಲ್ಲಿ ಬೆಂಗಳೂರಿನ ರಂಗ ಸಂಸ್ಥಾನ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಲಾ ಸಂಸ್ಕೃತಿ ಉತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಧೀರಜ್‌ಮುನಿರಾಜ್‌ಮಾತನಾಡಿ, ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೆ ದೊಡ್ಡಬಳ್ಳಾಪುರ ತನ್ನದೇ ಆದ ಮಹತ್ವ ಹೊಂದಿದೆ. ಇಲ್ಲಿನ ಕಲಾವಿದರ ಅನನ್ಯ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ ಎಂದರು.

ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್‌ಮಾತನಾಡಿ, ಕಲಾ ಚಟುವಟಿಕೆಗಳು ನಮ್ಮ ಪರಂಪರೆಯ ಪ್ರತೀಕ. ಎಲ್ಲರಲ್ಲೂ ಒಂದಲ್ಲಾ ಒಂದು ಕಲೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ಕ್ರೀಡಾಂಗಣದಲ್ಲಿ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್‌ಕೆ.ಆರ್ ಮಾತನಾಡಿ, ಬದುಕಿನಲ್ಲಿ ಸೋಲುಗಳನ್ನು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಸಾಂಸ್ಕೃತಿಕ ಕಲೆಗಳು ನಮಗೆ ನೀಡುತ್ತವೆ. ಸಡಿಲ ಗೊಳ್ಳುತ್ತಿರುವ ಸಂಬಂಧಗಳ ಸಬಲೀಕರಣಕ್ಕೆ ಸಾಂಸ್ಕೃತಿಕ ಮಾದರಿಯೊಂದೇ ಮಾರ್ಗ. ಧನಾತ್ಮಕ ಚಿಂತನೆಗಳನ್ನು ಹೆಚ್ಚಿನ ಜೀವನ.

ಪ್ರೀತಿಯನ್ನು ನೀಡುವ ಕಲಾ ಚಟುವಟಿಕೆಗಳಲ್ಲಿ ಎಲ್ಲ ವಯೋಮಾನದ ಜನರು ಪಾಲ್ಗೊಳ್ಳುವುದು ಅಗತ್ಯ. ಇಂದು ದೊಡ್ಡಬಳ್ಳಾಪುರದಲ್ಲಿ ಹಲವು ಗಾಯಕಿಯರು ಮೊದಲ ಬಾರಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಸದಭಿರುಚಿಯ ಕಾರ್ಯಕ್ರಮಗಳು ಆಯೋಜನೆಗೊಳ್ಳುವುದು ಅಗತ್ಯ ಎಂದು ಹೇಳಿದರು.

ರಂಗ ಸಂಸ್ಥಾನದ ಅಧ್ಯಕ್ಷ ಡಾ.ಬಂಡ್ಲಹಳ್ಳಿ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಪೋಷಕರಾದ ಅರುಣಾಮೂರ್ತಿ, ಬಿ.ವಿ.ಮೇಘನಾ ಕುಮಾರ್, ರುಚಿತಾ ಬೆಂಗಳೂರು, ಹಂಸವೇಣಿ ಸೇರಿದಂತೆ ಅನೇಕ ಕಲಾ ತಂಡಗಳ ಪ್ರಮುಖರು ಭಾಗಿಯಾದರು.

ಶತಕಂಠಗಳ ಸಮೂಹ ಗಾಯನಜಾನಪದ ಸಮೂಹ ನೃತ್ಯ, ಕೋಲಾಟ ಸಮೂಹ ನೃತ್ಯ, ಸಮೂಹ ಕುಣಿತ ಭಜನೆ ಮತ್ತಿತರರ ಕಾರ್ಯಕ್ರಮಗಳು ನಡೆದವು

 ನಮ್ಮ ಪೂರ್ವಿಕರು ಮದುವೆ ಹಬ್ಬ ಹರಿ ದಿನಗಳಲ್ಲಿ ಹಳ್ಳಿಯ ಸೊಗಡಿನ ಜಾನಪದ ಕಲೆಗಳಾದ ಕೋಲಾಟ ಸೋಬಾನೆ ಪದ ಜಾನಪದ ಭಜನೆ ಕೀರ್ತನೆ  ಹಾಡುವುದರ ಮೂಲಕ ಕಲೆಗೆ ಬಹಳಷ್ಟು ಮಹತ್ವ ನೀಡುತ್ತಿದ್ದರು.

ಬೇಸಿಗೆ ಕಾಲ ಬಂದರೆ ಸಾಕು ಹಳ್ಳಿಗಳಲ್ಲಿ  ರಂಗ ಕಲೆಯ ಬಯಲು ನಾಟಕ ಪೌರಾಣಿಕ ನಾಟಕ ಹುಲಿವೇಷ ಕಲೆಗಳಿಂದ  ಮನರಂಜಿಸುವುದರ ಮೂಲಕ ಮನ ಶಾಂತಿ ನೀಡುತ್ತಿದ್ದರು ನಂತರದ ಸುನ್ನೀವೇಷಗಳಲ್ಲಿ ಚಲನಚಿತ್ರಗಳು 90-20 ದಶಕಗಳಲ್ಲಿ ಮನರಂಜಿಸುವ ಜೊತೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು.

ಅದರೆ 21 ನೇ ಶತಮಾನದಲ್ಲಿ ಡಿಜಿಟಲ್ ಸಂಸ್ಕೃತಿಯಿಂದ ವಿದ್ಯುನ್ಮಾನ ಬೆಳೆದಂತೆ ಪೇಸ್ ಬುಕ್ ವಾಟ್ಸಪ್ ಇನ್ ಸ್ಪಾ ಗ್ರಾಂ  ಮೂಲಕ ಯುವಶಕ್ತಿ ಬೇರೂಂದು ಸ್ಥಿತಿ ಹೋಗಿ ಗುರು ಹಿರಿ ಕಿರಿಯ ಎಂಬ ಬೇಧವೇ ಇಲ್ಲದೆ ತನ್ನದೆ ಅದ ಕ್ಷೇತ್ರದ ವ್ಯಾಪ್ತಿ ತನ್ನದೆ ಆದ ಮನಸ್ಥಿತಿಯಲ್ಲಿ ಇರುವುದು ಅಪಘಾತಗಳಿಗೆ ಕಾರಣವಾಗಿದೆ”.
ಡಾ.ಬಂಡ್ಲಹಳ್ಳಿ ಜಯಕುಮಾರ್,ಅಧ್ಯಕ್ಷರು, ರಂಗ ಸಂಸ್ಥಾನ.

Share This Article
error: Content is protected !!
";