ಗುಟ್ಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆಯ  ಹೊರವಲಯದ  ಶ್ರೀ ಗುಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರ  ಮತ್ತು ಪೂಜೆ ನಡೆಯಿತು.

ದೇವರ ದರ್ಶನಕ್ಕೆ ಬಂದ  ಭಕ್ತರು ದರ್ಶನ ಪಡೆದು ಪುನೀತರಾದರು. ಬೆಳಗ್ಗೆ ಯಿಂದ ಬೆಣ್ಣೆಯ ಅಭಿಷೇಕ ಹಾಗು ವಿವಿಧ ಪೂಜಾ ಕೈಂಕರ್ಯಗಳು ನಡೆದರು.

- Advertisement - 

ಭಕ್ತರಿಗೆ ಬೆಳಿಗ್ಗೆಯಿಂದ  ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಂದ ಅರವಂಟಿಗೆ ಯಲ್ಲಿ ಪಾನಕ ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಆಂಜನೇಯ ಸ್ವಾಮಿಯ ಮೆರವಣಿಗೆ ಸಹ ಆಯೋಜಿಸಲಾಗಿತ್ತು.

 

- Advertisement - 

 

Share This Article
error: Content is protected !!
";