ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಜನತಾದಳ ಜಾತ್ಯತೀತ ಘಟಕದ ವತಿಯಿಂದ ಜೆಡಿಎಸ್ ಮುಖಂಡ ಎಂ ರವೀಂದ್ರಪ್ಪ ಮತ್ತು ತಾಲ್ಲೂಕು ಅಧ್ಯಕ್ಷ ಎನ್ ಹನುಮಂತರಾಯಪ್ಪ ರವರ ಸಮ್ಮುಖದಲ್ಲಿ ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಮತ್ತು ಮಾಜಿ ಮುಖ್ಯಮಂತ್ರಿಗಳು ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ರವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಹಿರಿಯೂರು ನಗರದ ಪ್ರಸಿದ್ಧ ಐತಿಹಾಸಿಕ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕೇಕ್ ಕಟ್ ಮಾಡಿ ಸಿಹಿ ಹಂಚಿಕೆ ಮಾಡಲಾಯಿತು.
ಇದಾದ ಮೇಲೆ ಸಮೀಪ ನೇಕ್ ಬೀಬಿ ದರ್ಗದಲ್ಲಿ ಪೂಜಾ ಸಲ್ಲಿಸಿ ಮತ್ತು ನಗರದ ಸಮುದಾಯ ಆಸ್ಪತ್ರೆಯ ಎಲ್ಲಾ ರೋಗಿಗಳಿಗೂ ಬ್ರೆಡ್, ಹಣ್ಣು, ಹಂಪಲುಗಳನ್ನು ವಿತರಿಸುವುದರ ಮೂಲಕ ಹುಟ್ಟು ಹಬ್ಬವನ್ನು ಸಂಭ್ರಮದಿಂದ ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವರು ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಆಯುರಾರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಡವರ ಬಂಧು ದಿನ ದಲಿತ ಆಶಾಕಿರಣ ಅತ್ಯಂತ ಕಡಿಮೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ ಹರಿಕಾರ, ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿ ಲಕ್ಷಾಂತರ ಕುಟುಂಬಗಳನ್ನು ಉಳಿಸಿದವರು ಕುಮಾರಸ್ವಾಮಿ ಅವರು ಎಂದು ಮುಖಂಡ ಎಂ.ರವೀಂದ್ರಪ್ಪ ತಿಳಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮೂಲಕ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುತ್ತಿದ್ದರಲ್ಲದೆ, ಜನತಾ ದರ್ಶನ, ಸುವರ್ಣ ಗ್ರಾಮ ಯೋಜನೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ, ನಮ್ಮ ಮೆಟ್ರೋಗೆ ಅಡಿಗಲ್ಲು, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ, ಬೀದಿಬದಿಯ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ ಜಾರಿ ಮಾಡುವ ಸಾಕಷ್ಟು ಸಾಧನೆ ಮಾಡಿದರು ಎಂದು ರವೀಂದ್ರಪ್ಪ ತಿಳಿಸಿದರು.

ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ, ರಾಜ್ಯದಲ್ಲಿ 760 ಪ್ರಾಥಮಿಕ ಶಾಲೆಗಳು, 1,000 ಪ್ರೌಢ ಶಾಲೆಗಳ ಆರಂಭ, 260 ಪದವಿ ಕಾಲೇಜುಗಳು, 500 ಪದವಿ ಪೂರ್ವ ಕಾಲೇಜುಗಳು, 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 6 ಮೆಡಿಕಲ್ ಕಾಲೇಜುಗಳ ಸ್ಥಾಪನೆ, ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ, ಪ್ರೌಢಶಾಲೆಗಳಲ್ಲಿಯೂ ಬಿಸಿಯೂಟ,1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಘೋಷಣೆ,
ಸುವರ್ಣ ಗ್ರಾಮ ಯೋಜನೆ, ರೈತ ಸಿರಿ ಯೋಜನೆ, ಫೆರಿಪೆರಲ್ ರಿಂಗ್ ರೋಡ್, ಕಾಂಪೀಟ್ ವಿಥ್ ಚೀನಾ, ಸಂಧ್ಯಾ ಸುರಕ್ಷಾ ಯೋಜನೆ, ರೋಶಿಣಿ ಯೋಜನೆ, ಮಾತೃಶ್ರೀ ಯೋಜನೆ, ಕಾವೇರಿ 4ನೇ ಹಂತ, ಬೆಂಗಳೂರಿನ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ / ಹೊಸ ಪ್ರದೇಶಗಳಿಗೆ ಕಾವೇರಿ ನೀರು ನೀಡುವ ಮೂಲಕ ಗಮನ ಸೆಳೆದು ಮನೆಮಾತಾಗಿ ಕುಮಾರಸ್ವಾಮಿ ಉಳಿದರು.
ಕೊಡಗಿನ ನೆರೆ ಸಂತ್ರಸ್ತರಿಗೆ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡಿದ ಕುಮಾರಣ್ಣನವರಿಗೆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಚೈತನ್ಯ, ಶಕ್ತಿಯನ್ನು ನೀಡಲಿ ಮತ್ತು ಕುಮಾರಣ್ಣ ನವರು ಮೊತ್ತಮ್ಮೆ ಮುಖ್ಯಮಂತ್ರಿ ಯಾದರೆ ಜನಪರ ಮತ್ತು ರೈತ ಪರ ಆಡಳಿತ ಮತ್ತೊಮ್ಮೆ ಕಾಣಬಹುದು ಎಂದು ಎಂ ರವೀಂದ್ರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕಾಗಿ ದುಡಿದಂತಹ ಎಲ್ಲಾ ಸಮುದಾಯದ ಹಿರಿಯ ಮುಖಂಡರುಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಗುಣಶೇಖರ್, ಜವನಗೊಂಡನಹಳ್ಳಿ ಮಂಜುನಾಥ್, ಕಾರ್ಯಾಧ್ಯಕ್ಷ ಜಲ್ದಪ್ಪ, ಮಹಾಲಿಂಗಪ್ಪ, ಎಸ್. ಹನುಮಂತಪ್ಪ, ಗಾರೆ ತಿಮ್ಮಯ್ಯ, ಪೂಜಾರ್ ತಿಮ್ಮಯ್ಯ, ದ್ಯಾಮೇಗೌಡ್ರು, ಮಹಿಳಾ ಅಧ್ಯಕ್ಷ ರಾಧಮ್ಮ, ಕರಿಯಪ್ಪ, ಲೋಕೇಶ್, ಮಂಜಣ್ಣ ಮನ ಮುಖಂಡರಾದ ನಿಸಾರ್ ಶಾಫಿರ್, ಬಸವರಾಜ್, ರಂಗಸ್ವಾಮಿ, ಆಲೂರು ರಂಗಸ್ವಾಮಿ, ಗುಡ್ಡದರಂಗಪ್ಪ, ದಿವಾಕರ್, ಅಪ್ಪಾಜಿಗೌಡ, ಪ್ರಕಾಶ್, ಶಿವ, ಮುಂಗಸವಳ್ಳಿ ತಿಮ್ಮಣ್ಣ, ದಿನೇಶ್ ಇನ್ನು ಮುಂತಾದ ಕಾರ್ಯಕರ್ತರು ಇದ್ದರು.

