ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶುಸಂಗೋಪನೆ ಇಲಾಖೆ ವತಿಯಿಂದ ರಾಷ್ಟ್ರಮಟ್ಟದ ಮಾನಿಟರಿಂಗ್ ಕಾರ್ಯಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಅಕ್ಟೋಬರ್ 7 ರಂದು ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ರಾಷ್ಟ್ರ ಮಟ್ಟದ ಮಾನಿಟರಿಂಗ್ ಯೋಜನೆಗಳ ಅನುಷ್ಠಾನವನ್ನು ಮಾರ್ಗಸೂಚಿಗಳನ್ವಯ ಕ್ರಮಬದ್ಧವಾಗಿ ಮತ್ತು ಸುಲಲಿತವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್ಡಿ) ಯ ವಿವಿಧ ಯೋಜನೆಗಳೊಂದಿಗೆ ವಿಶೇಷವಾಗಿ ಗೋಕುಲ್ ಮಿಷನ್, ರಾಷ್ಟ್ರೀಯ ಜಾನುವಾರು ವಿಷನ್, ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ ಯೋಜನೆಗಳಡಿ ರಾಷ್ಟ್ರೀಯವಾಗಿ ತೊಡಗಿಸಿಕೊಂಡಿರುವ ರಾಜ್ಯ ಮಟ್ಟದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಾಯಿತು.
ಈ ಬ್ರೀಫಿಂಗ್ ಸಭೆಯು ರಾಜ್ಯಾದ್ಯಂತ ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರಮಟ್ಟದ ಮಾನಿಟರ್ಗಳ ವಾರಾಂತ್ಯದ ಕ್ಷೇತ್ರ ಭೇಟಿಯ ಒಂದು ಭಾಗವಾಗಿದೆ.
ಆರ್ಜಿಎಂ, ಎನ್ಐಎಮ್, ಎನ್ಪಿಡಿಡಿ ಮತ್ತು ಎಲ್ಹೆಚ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ರಾಜ್ಯದ ಅಧಿಕಾರಿಗಳು ಯೋಜನೆಯ ಪ್ರಸ್ತುತ ಸ್ಥಿತಿ, ಫಲಶೃತಿ ಮತ್ತು ಸವಾಲುಗಳು ಸೇರಿದಂತೆ ಇಲ್ಲಿಯವರೆಗಿನ ಅನುಷ್ಠಾನದ ವಿವರಗಳನ್ನು ರಾಷ್ಟ್ರ ಮಟ್ಟದ ಮಾನಿಟರ್ಗಳ ಮುಂದೆ ಪ್ರಸ್ತುತಪಡಿಸಿದರು.
ಸಭೆಯ ನಂತರ ಎನ್ಎಲ್ಎಂಗಳು ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಮೌಲ್ಯಮಾಪನ ಮಾಡಲು ಕ್ಷೇತ್ರಕ್ಕೆ ತೆರಳುವರು. ಯೋಜನೆಗಳ ಅನುಷ್ಠಾನದಲ್ಲಿನ ಕಾರ್ಯಕ್ಷಮತೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮರ್ಥ ಅನುಷ್ಠಾನ ಖಚಿತತೆ ಕುರಿತು ಎನ್ಎಲ್ಎಂಗಳು ಮತ್ತು ಡಿಎಚ್ಎಡಿಗಳಿಗೆ ವರದಿಯನ್ನು ಸಲ್ಲಿಸಲಿದ್ದು, ಇದು ಜಾನುವಾರು ಸಾಕಾಣಿ ರೈತರ ಸಬಲೀಕರಣದತ್ತ ಸರ್ಕಾರದ ದೃಷ್ಟಿಯ ಸಾಧನೆಯನ್ನು ಖಚಿತ ಪಡಿಸಿಕೊಳ್ಳಲು ಅನುವಾಗುತ್ತದೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತೆ ಶ್ರೀರೂಪ, ಹಾಗೂ ಕೇಂದ್ರ ಸರ್ಕಾರದ ಡಿಎಚ್ಎಡಿ ಸಲಹೆಗಾರರು (ಅಂಕಿಅಂಶ) ಜಗತ್ ಹಝಾರಿಕಾ, ಮತ್ತು ಕೇಂದ್ರ ಪಶುಸಂಗೋಪನೆ ಅಂಕಿ ಅಂಶ ವಿಭಾಗದ ಸಹಾಯಕ ನಿರ್ದೇಶಕ ಮುಖೇಶ್ ದತ್ ಶರ್ಮಾ ಸಭೆಯಲ್ಲಿ ಉಪಸ್ಥಿತರಿದ್ದರು.