ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ವಿಶೇಷ ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಸೆ.22 ರಿಂದ 24 ರವರೆಗೆ ರಾಜ್ಯ ವಲಯ ಕೃಷಿ ಆಯುಕ್ತಾಲಯ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗೆ ಆಯುರ್ವೇದ ದಿನಾಚಾರಣೆ ಅಂಗವಾಗಿ ರೈತರಿಗೆ ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳು ಹಾಗೂ ಔಷಧೀಯ ಸಸ್ಯಗಳು ಕುರಿತ 3 ದಿನಗಳ ಉಚಿತ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯ ಮೊದಲನೇಯ ದಿನ ಸೆ.22ರಂದು ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದ ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ಅವರು ವಾಣಿಜ್ಯ ಬೆಳೆಯಾಗಿ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳು ಹಾಗೂ ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ವಿಷಯದ ಕುರಿತು ಮಾಹಿತಿ ನೀಡುವರು. ನಂತರ ಮೆಮಬೂಬ್ ಅವರು ಚಿತ್ರದುರ್ಗ ಜಿಲ್ಲೆಯ ಹವಾಗುಣಕ್ಕೆ ಪೂರಕವಾದ ಔಷದೀಯ ಸಸ್ಯಗಳ ಕುರಿತು ವಿಷಯ ಮಂಡನೆ ಮಾಡುವರು.

- Advertisement - 

ನೋರಾ ಅಗ್ರೋಟೆಕ್ ಮದಕರಿಪುರದ ಗಿರೀಶ್ ಎಂ.ಡಿ ಇವರು ವಿವಧ ಔಷಧೀಯ ಸಸ್ಯಗಳ ಒಪ್ಪಂದ ಕೃಷಿ, ಅವುಗಳ ಮಾರುಕಟ್ಟೆ ಮತ್ತು ಸಂಸ್ಕರಣೆ ಕುರಿತು ಮಾಹಿತಿ ನೀಡುವರು.

ಸೆ.23ರಂದು ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯ ಡಾ.ಅಶೋಕ್ ಪಿ ಪ್ರಾಧ್ಯಪಕರು (ಬೇಸಾಯಶಾಸ್ತ್ರ) ಇವರು ಸಿರಿಧಾನ್ಯಗಳ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡುವರು. ಮರಡಿದೇವಿಗೆರೆಯ ಸಾಂಪ್ರದಾಯಿಕ ಆಹಾರ ತಜ್ಞರಾದ ಡಾ. ಈಶ್ವರನ್ ಪಿ ತೀರ್ಥ ಇವರು ವಿವಿಧ ಆರೋಗ್ಯಕರ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮತ್ತು ಕೃಷಿ ವಿಜ್ಷಾನ ಕೇಂದ್ರ, ಹಿರಿಯೂರಿನ ಡಾ.ಸರಸ್ವತಿ (ಗೃಹ ವಿಜ್ಞಾನ) ಇವರು ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಪಾತ್ರ ಕುರಿತು ವಿಷಯ ಮಂಡನೆ ಮಾಡುವರು. ನಂತರ ಪರಿಸಿರಿ ನ್ಯಾಚುರಲ್ಸ್, ಲಕ್ಕಿಹಳ್ಳಿಯ ಲೋಕೇಶ್ ಇವರು ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ರೈತರಿಗೆ ಮಾಹಿತಿ ನೀಡುವರು.

- Advertisement - 

ತರಬೇತಿಯ ಮೂರನೇ ದಿನ ಸೆ.24ರಂದು ಔಷಧೀಯ ಸಸ್ಯಗಳನ್ನು ಬೆಳೆದ ಪ್ರಗತಿಪರ ರೈತರ ತಾಕು, ಪರಿಸಿರಿ ನ್ಯಾಚುರಲ್ಸ್, ಲಕ್ಕಿಹಳ್ಳಿ ಸಿರಿಧಾನ್ಯ ಸಂಸ್ಕರಣೆ ಕೇಂದ್ರ ಮತ್ತು ನೋರಾ ಅಗ್ರೋಟೆಕ್ ಮದಕರಿಪುರದ ಔಷಧೀಯ ಸಸ್ಯಗಳ ಸಂಸ್ಕರಣೆ ಕೇಂದ್ರಕ್ಕೆ ರೈತರನ್ನು ಕರೆದುಕೊಂಡು ಹೋಗಲಾಗುವುದು.

ಆದ ಪ್ರಯುಕ್ತ ಆಸಕ್ತ 50 ಜನ ರೈತಭಾಂದವರು ಸದರಿ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.

ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.

 

 

 

Share This Article
error: Content is protected !!
";