ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ದೇಶದ ವೀರ ಯೋಧರು ಹಾಗೂ ಭಾರತೀಯ ನಾಗರಿಕ ಬಂಧುಗಳನ್ನು ರಕ್ಷಣೆ ಮಾಡುವಂತೆ ಶನಿವಾರ ಹಿರಿಯ ಜೀವಿ ಎಲ್.ನಾರಾಯಣಾಚಾರ್ ಅವರು ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶನಿವಾರ ಆಂಜನೇಯ ಪ್ರಭುವಿನ ಪೂಜೆಯ ವಾರ ಇದ್ದು ಆಂಜನೇಯ ಸ್ವಾಮಿ ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ವೀರ ಯೋಧರಿಗೆ ಇನ್ನೂ ಹೆಚ್ಚಿನ ಬಲ ನೀಡಲೆಂದು ಭಕ್ತಿಯಿಂದ ಅವರು ಪ್ರಾರ್ಥಿಸಿದ್ದಾರೆ.
ವೀರಯೋಧರಿಗೆ, ದೇಶ ಕಂಡ ಅಪ್ರತಿಮ ದೇಶಭಕ್ತ ಪ್ರಧಾನಿ ನರೇಂದ್ರ ಮೋದಿ, ಹೆಸರಿಗೆ ತಕ್ಕಂತೆ ರಕ್ಷಣೆಗೆ ಮುಂದಾಗಿರುವ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರಳತೆಯ ಸಕಾರಮೂರ್ತಿ ವಿದೇಶಾಂಗ ಸಚಿವರಾದ ಜೈ ಶಂಕರ್, ಮಹಾ ಭಾರತದಲ್ಲಿ ಅರ್ಜುನನಿಗೆ ಸಾರಥಿಯಾಗಿದ್ದ ರೀತಿಯಲ್ಲಿ ಇರುವ
ರಾಷ್ಟ್ರೀಯ ಭದ್ರತಾ ಸಲಹೆಗಾರ ನಿವೃತ್ತ ಐಪಿಎಸ್ ಅಧಿಕಾರಿ ಅಜೀತ ದೋವೆಲ್ ರವರೆಲ್ಲರಿಗೂ ವಿಶೇಷವಾಗಿ ವೀರ ಯೋಧರಿಗೆ ವಿಶೇಷ ದೇಶ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಮೂರು ಸೇನಾ ಪಡೆಗಳಿಗೂ ಸ್ವತಂತ್ರ ಅಧಿಕಾರ ಕೊಟ್ಟ ಮೋದಿ ಇವರಿಗೆ ಅಭಿನಂದನೆಗಳನ್ನು ನಾರಾಯಣಾಚಾರ್ ತಿಳಿಸಿದ್ದಾರೆ.