ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಾತನಾಡುತಿದೆ
ಮನೆಯ ತೋರಣ*
ಅದೇನು ಸಂಭ್ರವೋ
ನಾ ಕಾಣೆ
ಹಬ್ಬ ಬಂದರೆ ಹೊರ
ಬರುವ ಮನೆಯ
ತೋರಣಕೆ
ಅದೆಷ್ಟು ಸಂವತ್ರರಗಳ
ಕಂಡಿತೋ ನಾಕಾಣೆ
ಇಂದಿಗೂ ಮದುವಣಗಿತ್ತಿಯಂತೆ
ಕಂಗೊಳಿಸಿ ನಳನಳಿಸುತಿದೆ
ನಿನ್ನ ಹೆಣೆದವರ್ಯಾರೋ
ಬಣ್ಣ ಬಣ್ಣದ ಹೂ ತುಂಬಿ
ಅಂದಗೊಳಿಸಿದವರು ಇಂದಿಲ್ಲ
ನೆನಪಿಟ್ಟುಕೊಡಿರುವೆ
ಮಧುರ ಕ್ಷಣಗಳ
ನಿನ್ನೊಡಲ ಗರ್ಭದಲ್ಲಿ
ಓ…ಬಾಗಿಲ ತೋರಣವೇ
ಸಿಂಗರಿಸಿ ಹಬ್ಬ ಹರಿದಿನಗಳ ಸಂಬ್ರಮ
ಹೆಚ್ಚಿಸಿ ಮರೆಯಾಗುವೆ
ಮರಳಿ ಬರುವೆ
ಮುಂದಿನ ಸಂವತ್ಸರದ
ಹಬ್ಬಗಳಿಗೆ
ತೋರಣವೆ…. ಕಂಗೊಳಿಸುತಿರು
ಅನುದಿನವು
ಹರುಷ ,ನೆಮ್ಮದಿಯ
ಹೊನಲು ಸೂಸಿ
ರಚನೆ: ಗುರಾನಿ, ಜಿ ಆರ್ ನಿಂಗೋಜಿ ರಾವ್, ದಾವಣಗೆರೆ 9036389240