ಸೆ.20ರಂದು ಹಿರಿಯ ನಾಗರಿಕರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಇದೇ ಸೆ.20ರಂದು ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪುರುಷ ಮತ್ತು ಮಹಿಳೆಯರು ಕ್ರೀಡಾ ಸ್ಪರ್ಧೆಗಳಾದ ಬಿರುಸಿನ ನಡಿಗೆ, ಬಕೆಟ್‍ನಲ್ಲಿ ಬಾಲ್ ಎಸೆಯುವುದು, ಸಾಂಸ್ಕøತಿಕ ಸ್ಪರ್ಧೆಗಳಾದ ಗಾಯನ ಹಾಗೂ ಏಕಪಾತ್ರಾಭಿನಯದಲ್ಲಿ ಪಾಲ್ಗೊಳ್ಳಬಹುದು.

- Advertisement - 

60 ರಿಂದ 70 ವರ್ಷದ ಒಳಗಿನವರು ಮಾತ್ರ ಮ್ಯೂಸಿಕಲ್ ಚೇರ್ ಕ್ರೀಡೆ ಭಾಗವಹಿಸಬಹುದು. ಸೆ.20 ರಂದು ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ಸ್ಪರ್ಧಿಗಳು ಬೆಳಿಗ್ಗೆ 9:30 ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ ಆವರಣದಲ್ಲಿನ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕಚೇರಿ ಭೇಟಿ ಅಥವಾ ದೂರವಾಣಿ ಸಂಖ್ಯೆ 08194-235284 ಕರೆ ಮಾಡುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

- Advertisement - 

 

 

 

Share This Article
error: Content is protected !!
";