ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಯೋಮಿತಿ ಇಲ್ಲದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಆರೋಗ್ಯಕ್ಕೆ ದಾರಿ ಮಾಡಲಿದೆ. ಕ್ರೀಡೆಗಳು ನಮ್ಮ ದೇಹ ಮತ್ತು ಮನಸ್ಸನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತವೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಹಿರಿಯೂರು ತಾಲೂಕಿನ ಕಣಜನಹಳ್ಳಿಯಲ್ಲಿ ಸ್ನೇಹ ಕ್ಕೂಟ ಕ್ರಿಕೆಟರ್ಸ್ ವತಿಯಿಂದ ಕೆ ಎಲ್ ಸತ್ಯಮೂರ್ತಿ, ಸತೀಶ್ ವಿ ಹಾಗೂ ಶಿವಮೂರ್ತಿ ಕೆಎ ರವರ ಸ್ಮರಣಾರ್ಥಕವಾಗಿ ಆಯೋಜಿಸಿದ್ದ ವೈಟಿಎಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ನಿತ್ಯದ ಬದುಕಿನಲ್ಲಿ ಕ್ರಿಯಾಶೀಲವಾಗಿರಬೇಕಾದರೆ ವಯೋಮಿತಿ ಇಲ್ಲದೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಆಗ ದೈಹಿಕ ಆರೋಗ್ಯ ಸುಧಾರಣೆ, ಮಾನಸಿಕ ಆರೋಗ್ಯ ಸುಧಾರಣೆ ಆಗುವುದರ ಜೊತೆಯಲ್ಲಿ ಸ್ನೇಹ ಮತ್ತು ಸಾಮಾಜಿಕ ಸಂಬಂಧಗಳು ಬೆಳೆದು ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅತಿಮುಖ್ಯವಾಗಿ ಒತ್ತಡ ಕಡಿಮೆಯಾಗುತ್ತದೆ. ಕ್ರೀಡೆಗಳು ನಮ್ಮ ದೇಹವನ್ನು ಚುರುಕಾಗಿರಿಸಲು ಸಹಾಯ ಮಾಡುತ್ತವೆ. ಕ್ರೀಡೆಗಳು ನಮ್ಮ ಮನಸ್ಸನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತವೆ. ಕ್ರೀಡೆಗಳು ನಮ್ಮ ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತವೆ. ಹಾಗಾಗಿ, ವಯೋಮಿತಿ ಇಲ್ಲದ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ! ಎಂದು ವೈ.ತಿಪ್ಪೇಸ್ವಾಮಿ ಕರೆ ನೀಡಿದರು.
ಲೋಕೋಪಯೋಗಿ ಇಲಾಖೆ ರಾಜಣ್ಣ, ಪಾಂಡಪ್ಪ, ಡಿ.ಬಿ ಬಸವರಾಜ್, ಬೀರಣ್ಣ, ರವಿ ಎಸ್ ಆರ್ ಎಲೆಕ್ಟ್ರಿಷಿನ್, ಪಿಕೆ ಶ್ರೀನಿವಾಸ್, ಶಿಕ್ಷಕ ರಘುನಾಥ್, ಬಿಎಫ್ ಟಿ ರಂಗಸ್ವಾಮಿ, ಚಿಕ್ಕೆಂಚಪ್ಪ, ಶಿವರಾಜು, ಶಿವಮೂರ್ತಿ, ಈರಣ್ಣ, ಮಾಜಿ ಅಧ್ಯಕ್ಷೆ ಮಂಜುಳಾ ಜೋಗೇಶ್, ಇಂದ್ರಮ್ಮ, ಮಂಜಣ್ಣ, ಬೋರ್ ವೆಲ್ ರಾಜಣ್ಣ, ಧರ್ಮಪುರ ಹಾಗೂ ಕಣಜನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

