ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ಶ್ರಾವಣಮಾಸದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು,
ಅದರಂತೆ ಪ್ರಸ್ತುತ ಸಾಲಿನ ಮಾಸದಲ್ಲೂ ಮುರುಘಾ ಪರಂಪರೆಯ ಮೂಲಕರ್ತೃ ಶ್ರೀ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸ್ಥಾನದ ಗದ್ದುಗೆಯಲ್ಲಿ ವಚನಾಭಿಷೇಕ, ವಚನಪಠಣ ಸೇರಿದಂತೆ ವಿಶೇಷಪೂಜೆ ನಡೆಯಲಿದ್ದು, ಅದರೊಂದಿಗೆ ಪೀಠ ಪರಂಪರೆಯಲ್ಲಿ ಸಾಗಿ ಬಂದು ಸಮಾಜಕ್ಕೆ ಅವರz ಆದ ರೀತಿಯಲ್ಲಿ ಕೊಡುಗೆ ನೀಡಿದ ಮಹಾಸ್ವಾಮಿಗಳವರ ಜೀವನ ದರ್ಶನ ಚಿಂತನ ಕಾರ್ಯಕ್ರಮವು ಈ ಮಾಸದಲ್ಲಿ ಪ್ರತಿದಿನ ಬೆಳಗ್ಗೆ ನೆರವೇರಲಿದೆ.
ಅದರಂತೆ, ಮೊದಲದಿನ ಜು.25ರ ಶುಕ್ರವಾರ ಬೆಳಗ್ಗೆ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜೀವನ ದರ್ಶನ ವಿಷಯಾವಲೋಕನ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

