ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಹೇಮದಳ ಗ್ರಾಮದಲ್ಲಿರುವ ಶ್ರೀವಾರಿ ಕ್ಷೇತ್ರ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮವು ಜನವರಿ 9ರಿಂದ 11ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಪೂಜಾ ಕಾರ್ಯಕ್ರಮದ ಸಂಯೋಜಕರು ತಿಳಿಸಿದ್ದಾರೆ.
ಇದರ ಅಂಗವಾಗಿ ಜನವರಿ 9ರ ಗುರುವಾರ ಏಕಾದಶಿ, ಗೋಪೂಜೆ ಮತ್ತು ವಿವಿಧ ಕಾರ್ಯಕ್ರಮಗಳೊಂದಿಗೆ ಹೋಮಗಳನ್ನು ನಡೆಸಲಾಗುವುದು. ಜನವರಿ 10ರ ಶುಕ್ರವಾರ ವೈಕುಂಠ ಏಕಾದಶಿ ಬೆಳಗಿನಜಾವ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀವೆಂಕಟೇಶ್ವರ ಸುಪ್ರಭಾತ, ಸೇವೆ, ವೇದಪಾರಾಯಣ, ಕಲಶಾರಾಧನೆ, ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಅಂದು ಸಂಜೆ ದ್ವಾದಶಿ ಇದ್ದು, ವಿಷ್ಣುಸಹಸ್ರ ನಾಮಪಾರಾಯಣ ಹಾಗೂ ವಿವಿಧ ಹೋಮಗಳು ನಡೆಯಲಿವೆ. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ನಂತರ ಪೂರ್ಣಾಹುತಿ ಇರುತ್ತದೆ.
ನಂತರ ಜನವರಿ 11ರ ಶನಿವಾರ ಶ್ರೀ ವಿದ್ವಾನ್ ಶೇಷಗಿರಿ ದಾಸ್ ಇವರಿಂದ ಹರಿನಾಮ ಸಂಕೀರ್ತನೆ ಇರುತ್ತದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಯೋಜಕರು ಮನವಿ ಮಾಡಿದ್ದಾರೆ.