ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಗವನ್ನಾಮ ಸಂಕೀರ್ತನೆಯ ಮೂಲಕ ಭಕ್ತಿಪಂಥವನ್ನು ಪ್ರಸಾರ ಮಾಡಿದ ಮಹಾನ್ ಸಂತ ಮಹಾತ್ಮ ಶ್ರೀಚೈತನ್ಯ ಮಹಾಪ್ರಭುಗಳು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಹೆಚ್. ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು.
ನಗರದ ತ್ಯಾಗರಾಜನಗರದ ಸದ್ಭಕ್ತೆ ನಂಜಮ್ಮ ಕೆಂಚಪ್ಪ ಶಿಕ್ಷಕಿ ಸವಿತಾ ನಿವಾಸದಲ್ಲಿ “ಶ್ರೀಚೈತನ್ಯ ಮಹಾಪ್ರಭುಗಳ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಚೈತನ್ಯ ಮಹಾಪ್ರಭುಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಜಯಂತೋತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ , ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ರತ್ನಮ್ಮ ಜಯಚಂದ್ರ , ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಜಯಂತೋತ್ಸವ ಕಾರ್ಯಕ್ರಮದಲ್ಲಿ ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಸರ್ವಮಂಗಳಾ, ಪ್ರೇಮಾ, ಸುನೀತಾ ಅನುಸೂಯ ರಾಘವೇಂದ್ರ, ಟಿ.ಎಂ.ವಿಜಯಾಗುರು, ಗೀತಾ ಸುಂದರೇಶ್ ದೀಕ್ಷಿತ್, ರಾಧಮ್ಮ,ಸಹನಾ, ಸರಸ್ವತಿ ರಾಜು, ಸರಸ್ವತಿ ನಾಗರಾಜ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

