ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10ರಿಂದ 18 ರವರೆಗೆ ನಡೆಯುವ ರಾಸುಗಳ ಜಾತ್ರೆ ಹಾಗು ಡಿ. 25ರಂದು ನಡೆಯಲಿರುವ ರಥೋತ್ಸವ ಪೂರ್ವ ಸಿದ್ಧತೆ ಹಾಗು ಬರುವ ಭಕ್ತಾಧಿಗಳಿಗೆ ತೊಂದರೆಯಾಗದಂತೆ ನಿಗಾವಹಿಸಲು ಜಿಲ್ಲೆಯ
ಜಿಲ್ಲಾಧಿಕಾರಿಗಳಾದ ಬಸವರಾಜು, ಐ ಎ ಎಸ್, ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅರುಂಧತಿ, ಐ ಎ ಎಸ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಕೆ ಎ ಎಸ್, ತಹಸೀಲ್ದಾರ್ ಮಲ್ಲಪ್ಪ, ರವರು ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಹಾಗು ಸದಸ್ಯರು,ಪೊಲೀಸ್ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಮಾಜ ಸೇವಕರಾದ ಮುತ್ತಣ್ಣನವರು ಹಾಜರಿದ್ದರು.

