ಜಾತಿ ಗಣತಿಯಲ್ಲಿ ಕುಂಚಿಟಿಗ ಎಂದೇ ಬರೆಯಿಸಿ-ಶ್ರೀ ಹನುಮಂತನಾಥ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕುಂಚಿಟಿಗರು ಯಾವುದೇ ವಿಚಾರಗಳಿಗೆ ಕಿವಿಗೊಡಬಾರದು. ಸೆ-22 ರಿಂದ ನಡೆಯಲಿರುವ ಗಣತಿಯಲ್ಲಿ ಜಾತಿ ಮತ್ತು ಉಪ ಜಾತಿ ಎರಡು ಕಲಂಗಳಲ್ಲಿ ಕುಂಚಿಟಿಗ ಎಂದೇ ಬರೆಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.

ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಎಂದು ಬರೆಯಿಸುವುದರಿಂದ ಸಾಕಷ್ಟು ಅನುಕೂಲವಿದೆ. ಶಾಲಾ ದಾಖಲಾತಿಗಳಲ್ಲೂ ಕುಂಚಿಟಿಗ ಎಂದು ಬರೆಸಬೇಕು. ಕುಂಚಿಟಿಗ ಬಿಟ್ಟು ಬೇರೆ ಜಾತಿ ಬರೆಸಿದರೆ ಉದ್ಯೋಗಕ್ಕೆ ಸೇರಿಕೊಳ್ಳುವ ಸಂದರ್ಭದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಸ್ವಾಮೀಜಿ ಎಚ್ಚರಿಸಿದರು.

- Advertisement - 

ಕರ್ನಾಟಕ ರಾಜ್ಯದ ಬಯಲುಸೀಮೆ, ಮಲೆನಾಡು, ಕರಾವಳಿ, ಕಲ್ಯಾಣ ಕರ್ನಾಟಕ ಸೇರಿದಂತೆ 19 ಜಿಲ್ಲೆ 47 ತಾಲ್ಲೂಕುಗಳಲ್ಲಿ 30 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ತ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ, ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯುವ ಜಾತಿಗಣತಿಯಲ್ಲಿ  “ಕುಂಚಿಟಿಗ “ಎಂದು ಬರೆಯಿಸಬೇಕು ಎಂಬುದಾಗಿ  ತಿಳಿಸಿದರು.

1928ರಲ್ಲಿ ಮೈಸೂರು ಸರ್ಕಾರ ಕುಂಚಿಟಿಗ ಒಂದು ಸ್ವತಂತ್ರ ಜಾತಿ ಎಂದು ಹೊರಡಿಸಿದ ಆದೇಶ, ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲವೇ ಅಲ್ಲ ಎಂದು ತಿಳಿಸಿದರು.

- Advertisement - 

ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ.ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೇ ಶಿಫಾರಸ್ಸು ಮಾಡಿರುವುದರಿಂದ ಎಲ್ಲರೂ ಕುಂಚಿಟಿಗ ಎಂದು ಬರೆಯಿಸಿದರೆ ಮುಂದೆ  ಕೇಂದ್ರ  ಓ ಬಿ ಸಿ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ, ಇದರಿಂದಾಗಿ ನಮ್ಮ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

 ನಮ್ಮ ಸಂವಿದಾನದಲ್ಲಿ ಧರ್ಮ ಬದಲಾವಣೆಗೆ ಅವಕಾಶ ಇದೆಯೇ ವಿನಃ ಜಾತಿ ಬದಲಾವಣೆಗೆ ಅವಕಾಶ ಇಲ್ಲ. ಆದ್ದರಿಂದ ಅವರಿವರ ಮಾತು ಕೇಳಿ ತಮ್ಮ ಮೂಲ ಜಾತಿ ಬಿಟ್ಟು ಬೇರೆ ಜಾತಿ ಹೆಸರು ಬರೆಯಿಸಬೇಡಿ ಎಲ್ಲರು ಕುಂಚಿಟಿಗ  ಎಂದು ಬರೆಯಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ತಿಳಿಸಿದರು.

 ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ, ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಕೆ ಜಿ ಗೌಡ, ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ಮಲ್ಲಪ್ಪನ ಹಳ್ಳಿ ಜೋಗೇಶ್, ಎಸ್ ವಿ ರಂಗನಾಥ್, ವಿ. ಕುಭೇರಪ್ಪ, ಕಾತ್ರಿಕೆನಹಳ್ಳಿ ಮಂಜುನಾಥ್, ದಿಂಡಾವರ ಚಂದ್ರಗಿರಿ, ಚಿಲ್ಲಹಳ್ಳಿ ನಿಜಲಿಂಗಪ್ಪ, ಆಪ್ಟಿಕಲ್ಸ್ ರಾಜೇಶ, ಕೆ ಕೆ ಹಟ್ಟಿ ಜಯಪ್ರಕಾಶ, ದೇವರಾಜ ಮೇಷ್ಟ್ರು, ಚಿಲ್ಲಹಳ್ಳಿ ನಿಜಲಿಂಗಪ್ಪ,

ವಕೀಲ ಲಕ್ಷ್ಮಣಗೌಡ, ಬಾಬು ಕಾಮ್ಟೆ, ಹುಚ್ಚವ್ವನಹಳ್ಳಿ ಅವಿನಾಶ, ಹೊಸಯಳನಾಡು ಚಂದ್ರಶೇಖರ್, ಪೆಪ್ಸಿ ಹನುಮಂತರಾಯ, ಕಸವನಹಳ್ಳಿ ಶ್ರೀನಾಥ್, ಪಿಲಾಜನಹಳ್ಳಿ ರಾಮಸ್ವಾಮಿ, ಯು ವಿ ಗೌಡ, ಪ್ರೇಮಕುಮಾರ, ಶಶಿಕಲಾ, ರಮ್ಯಾರಾಜುಗೌಡ, ಸಲಬೊಮ್ಮನಹಳ್ಳಿ ಭಾರತಿ, ವಾಣಿ ಮಹಾಲಿಂಗಪ್ಪ, ಕುಸುಮ ಮತ್ತಿತರರು ಸುದ್ದಿ ಗೋಷ್ಠಿಯಲ್ಲಿ ಇದ್ದರು.

 

 

 

 

 

Share This Article
error: Content is protected !!
";