ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಅರ್ಕಾವತಿ ತೀರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಜಯಂತೋತ್ಸವ, ಹಾಗೂ ವಾರ್ಷಿಕ ಮಹೋತ್ಸವವನ್ನು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಮೇ-11ರ ಭಾನುವಾರ ಹಾಗೂ 12ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲಪಕ್ಷ ಮೇ-11 ಭಾನುವಾರ ಚಮರ್ದಶಿಯಿಂದ ಮೇ-12ರ ಸೋಮವಾರ ಪೌರ್ಣಬುವರೆಗೂ ಶ್ರೀ ಪಾಂಚರಾತ್ರ ದಿವ್ಯಾಗಮರೀತ್ಯಾ ಏಕಾಕ್ಷಿಕ ಏಕ ಕುಂಡಾತ್ಮಕ ವಿಧಾನದಲ್ಲಿ ನೃಸಿಂಹ ಜಯಂತಿ ಹಾಗೂ ವಾರ್ಷಿಕ ಮಹೋತ್ಸವ ಮತ್ತು ಸೋಮವಾರ ಪೌರ್ಣಮಿಯಂದು ಸತ್ಯನಾರಾಯಣಸ್ವಾಮಿ ಪೂಜೆ ನಡೆಯಲು ಭಗವತ್ತೇರಣೆಯಾಗಿರುತ್ತದೆ. ಭಗವತ್ ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ತಮ್ಮ ತನು, ಮನ, ಧನ, ಧಾನ್ಯಗಳನ್ನು ಅರ್ಪಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಕಾರ್ಯಕ್ರಮದ ವಿವರ :
ಮೇ-11ರ ಭಾನುವಾರದಂದು ಬೆಳ್ಳಿಗೆ 6 ರಿಂದ ಸುಪ್ರಭಾತಸೇವೆ, ಭಗವದನುಜ್ಞೆ, ವಿಶ್ವಕ್ಷೇನಾರಾಧನೆ, ಭಗವದ್ವಾಸುದೇವ ಪುಣ್ಯಾಹ, ಸ್ನಪನ ಕಳಶಾರಾಧನೆ ಜೊತೆಗೆ ಹಲವು ಬಗೆಯ ಹೋಮ ಕಾರ್ಯಗಳು ಸ್ವಾಮಿಯವರಿಗೆ ಮಹಾ ಕುಂಭ ಪ್ರೋಕ್ಷಣೆ, ಅಲಂಕಾರಸೇವೆ ನೆಡೆಯಲಿದ್ದು
ಮಧ್ಯಾಹ್ನ 12:30 ಗಂಟೆಗೆ ಪ್ರಾಕಾರೋತ್ಸವ, ಸರ್ವದರ್ಶನ ಹಾಗೂ ತೀರ್ಥಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿದೆ ಹಾಗೂ ಸಂಜೆ 06:00 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಸಾಯಂಮಾರಾಧನೆ. ಸಹಸ್ರ ನಾಮಾರ್ಚನೆ, ಮಹಾ ಮಂಗಳಾರತಿ ನೆಡೆಯಲಿದೆ.
ಮೇ-12ರ ಸೋಮವಾರ ಬೆಳಿಗ್ಗೆ 07:30 ಗಂಟೆಗೆವಿಶ್ವಕ್ಷೇನಾರಾಧನೆ, ಭಗವದ್ವಾಸುದೇವ ಪುಣ್ಯಾಹ, ಸತ್ಯನಾರಾಯಣಸ್ವಾಮಿ ವ್ರತ. ಮಧ್ಯಾಹ್ನ 12:30 ಗಂಟೆಗೆ ಮಹಾಮಂಗಳಾರತಿ, ಸರ್ವದರ್ಶನ ಹಾಗೂ ತೀರ್ಥಪ್ರಸಾದ ವಿನಿಯೋಗ ನೆಡೆಯಲಿದೆ.
ಶ್ರೀ ನರಸಿಂಹಸ್ವಾಮಿಯವರ ಜಯಂತೋತ್ಸವ, ಹಾಗೂ ವಾರ್ಷಿಕ ಮಹೋತ್ಸವ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು ಮನ ಧನ ಸಮರ್ಪಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535658866